• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಧಿಕಾರಿಗಳ ಎಚ್ಚರಿಕೆಗೆ ಎಚ್ಚೆತ್ತ ಕೋಳಿ ಅಂಗಡಿಕಾರರು – ತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಸುರಿದಿದ್ದ ತ್ಯಾಜ್ಯ ವಿಲೇವಾರಿ

June 22, 2021 by bkl news Leave a Comment

ಭಟ್ಕಳ: ತಾಲೂಕಿನ ಪುರಸಭೆಯ ವತಿಯಿಂದ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಂಬಂಧ ವಿಧಿಸಲಾಗಿರುವ ಸಾಗಾಟ ಶುಲ್ಕವನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಭರದಲ್ಲಿ ಅಂಗಡಿಕಾರರು ತ್ಯಾಜ್ಯವನ್ನು ತಂದು ವಿಲೇವಾರಿ ಘಟಕದ ಮುಂದೆ ಸುರಿದಿದ್ದು, ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಮಂಗಳೂರಿನಲ್ಲಿರುವ ಸೌಝಾ ಫಡ್ ಪ್ರೊಸೆಸಿಂಗ್ ಘಟಕಕ್ಕೆ ( ಶ್ವಾನ ಮತ್ತಿತರ ಪ್ರಾಣಿಗಳಿಗೆ ಆಹಾರ ಉತ್ಪಾದನೆ) ಸಾಗಿಸಲು ಭಟ್ಕಳ ಪುರಸಭೆ ಕ್ರಮ ಕೈಗೊಂಡಿತ್ತು. ಇದರಿಂದಾಗಿ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿದಿದ್ದಲ್ಲದೇ ಭಟ್ಕಳ ಪುರಸಭೆಯ ಈ ಕ್ರಮ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ ಕೊರೊನಾ ತಡೆ ಲಾಕ್‍ಡೌನ್ ಹಾಗೂ ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದಾಗಿ ತ್ಯಾಜ್ಯ ಸಾಗಾಟ ದುಬಾರಿಯಾಗಿ ಪರಿಣಮಿಸಿದ್ದು, ಮಂಗಳೂರು ಸೌಝಾ ಕಂಪೆನಿಯವರು ತ್ಯಾಜ್ಯವನ್ನು ಆಮದು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಅದರೆ ತ್ಯಾಜ್ಯ ವಿಲೇವಾರಿಯ ಅಗತ್ಯವನ್ನು ಮನಗಂಡಿರುವ ಪುರಸಭೆ, ಕೋಳಿ ಅಂಗಡಿಗಳ ಮಾಲಕರನ್ನು ಕರೆಯಿಸಿ ಸಭೆ ನಡೆಸಿದ್ದು, ಸಾಗಾಟದ ಸಮಸ್ಯೆ ಬಗೆ ಹರಿಯುವವರೆಗೂ ಪ್ರತಿ ಅಂಗಡಿಗೆ ತಲಾ ರು.200 ರುಪಾಯಿ ನಿಗದಿಪಡಿಸಿ, ನಂತರ ಖರ್ಚು ವೆಚ್ಚವನ್ನು ನೋಡಿಕೊಂಡು ಶುಲ್ಕ ನಿಗದಿಯ ವಿಷಯದಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಬಗ್ಗೆ ಎಲ್ಲರ ಒಪ್ಪಿಗೆಯನ್ನು ಪಡೆಯಲಾಗಿತ್ತು. ಆದರೆ ಸಭೆಯ ನಂತರ ಕೆಲ ಅಂಗಡಿಕಾರರು 200 ರುಪಾಯಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆ ತ್ಯಾಜ್ಯ ವಿಲೇವಾರಿಗೆ ಹಣ ನೀಡಿದ ಅಂಗಡಿಕಾರರಿಂದ ತ್ಯಾಜ್ಯವನ್ನು ಸಂಗ್ರಹಿಸಿ ಮಂಗಳೂರಿಗೆ ಕಳುಹಿಸಲಾಗಿದ್ದು, ಉಳಿದವರು ತ್ಯಾಜ್ಯ ವಿಲೇವಾರಿ ಸಾಧ್ಯವಾಗದೇ ಪುರಸಭೆಯ ತೀರ್ಮಾನವನ್ನು ವಿರೋಧಿಸುವ ಭರದಲ್ಲಿ ತ್ಯಾಜ್ಯವನ್ನು ತಂದು ಇಲ್ಲಿನ ಸಾಗರರೋಡ್ ತ್ಯಾಜ್ಯ ವಿಲೇವಾರಿ ಘಟಕದ ಮುಂದೆ ಹೆದ್ದಾರಿಯ ಬದಿಯಲ್ಲಿಯೇ ಸುರಿದಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಪುರಸಭೆ ಮುಖ್ಯಾಧಿಕಾರಿ ದೇವರಾಜ, ಹಿರಿಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ಸ್ಥಳಕ್ಕೆ ಧಾವಿಸಿ ಬಂದಿದ್ದು, ಅಂಗಡಿಕಾರರ ಕ್ರಮದ ವಿರುದ್ಧ ಆಕ್ರೋಶ ಹೊರ ಹಾಕಿದರು. ಯಾವುದೇ ಸಮಸ್ಯೆ ಇದ್ದಲ್ಲಿ, ಪುರಸಭೆ ಆಡಳಿತ ಅಥವಾ ಅಧಿಕಾರಿಗಳ ಗಮನಕ್ಕೆ ತರಬೇಕೇ ವಿನಃ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಇಂತಹ ನಡವಳಿಕೆ ಸರಿಯಲ್ಲ, ಕೂಡಲೇ ವಿಲೇವಾರಿ ಮಾಡದೇ ಇದ್ದರೆ ಪೊಲೀಸರಿಗೆ ದೂರು ನೀಡುವುದಾಗಿಯೂ ಅಧಿಕಾರಿಗಳು ಎಚ್ಚರಿಸಿದರು. ಇದರಿಂದ ವಿಚಲಿತರಾದ ಅಂಗಡಿಕಾರರು ತ್ಯಾಜ್ಯವನ್ನು ವಾಹನದಲ್ಲಿ ತುಂಬಿಸಿಕೊಂಡು ಅಲ್ಲಿಂದ ತೆರಳಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News, Trending Tagged With: ಆಕ್ರೋಶ ಹೊರ, ಕೋಳಿ ಅಂಗಡಿಗಳ ಮಾಲಕರ, ತ್ಯಾಜ್ಯ ವಿಲೇವಾರಿಯ ಅಗತ್ಯ, ಪುರಸಭೆ ಆಡಳಿತ, ಮನಗಂಡಿರುವ ಪುರಸಭೆ, ಶ್ವಾನ ಮತ್ತಿತರ ಪ್ರಾಣಿಗಳಿಗೆ ಆಹಾರ ಉತ್ಪಾದನೆ, ಸಮಸ್ಯೆ ಇದ್ದಲ್ಲಿ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,129 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar