ಭಟ್ಕಳ: ತಾಲೂಕಿನ ಮುಠ್ಠಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾನ್ ಮರಂಬಳ್ಳಿ ಗ್ರಾಮದ ಹಾಡಿ ಸರ್ವೆ ನಂ.155ರಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ಮಾಡುತ್ತಿರುವುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಹಾಗೂ ಕಂದಾಯ ಇಲಾಖೆ ಭಟ್ಕಳ ಇವುಗಳ ಜಂಟಿ ಕಾರ್ಯಾಚರಣೆಯ ಮೂಲಕ ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು.
ಕಳೆದ ಹಲವಾರು ದಿನಗಳಿಂದ ಅಕ್ರಮವಾಗಿ ಗಣಿಗಾರಿಕೆಯನ್ನು ಮಾಡುತ್ತಿರುವ ಕುರಿತು ಮರಂಬಳ್ಳಿ ಗ್ರಾಮಸ್ಥರು ಸಹಾಯಕ ಆಯುಕ್ತರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಹಾಗೂ ಇತರೇ ಅಧಿಕಾರಿಗಳಲ್ಲಿ ದೂರು ಸಲ್ಲಿಸಿದ್ದರು. ದೂರನ್ನು ಆಧರಿಸಿ ತಹಸೀಲ್ದಾರ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಎಚ್ಚರಿಕೆಯನ್ನು ನೀಡಿ ಕೆಂಪು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿದ್ದರು. ಆದರೆ ಗ್ರಾಮಸ್ಥರು ಮತ್ತೆ ಕೆಂಪುಕಲ್ಲು ಗಣಿಗಾರಿಕೆ ಆರಂಭವಾಗಿರುವ ಕುರಿತು ದೂರು ನೀಡಿದ್ದರಿಂದ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜಯರಾಮ ನಾಯ್ಕ, ರೆವೆನ್ಯೂ ಇನ್ಸಪೆಕ್ಟರ್ ಶಂಭು, ಗ್ರಾಮ ಸೇವಕ ಜಾನ್ಭಾಷಾ ಸೇರಿಂದ ಸಿಬ್ಬಂದಿಗಳು ಪೊಲೀಸ್ ಸಹಾಯದಿಂದ ದಾಳಿ ನಡೆಸಿ 2 ಟಿಲ್ಲರ್, 1 ಡೀಸೆಲ್ ಇಂಜಿನ್, 4 ಗುದ್ದಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment