ಯಲ್ಲಾಪುರ: ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಕರಣಗಳಿಗೆ ಸಂಬಧಿಸಿದಂತೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಹೆಮ್ಮಾಡಿಕುಂಬ್ರಿ ನಿವಾಸಿ ಗೋಪಾಲ ಕೃಷ್ಣ ನಾಯ್ಕ(೫೮) ಎಂಬಾತನು ಜೂ೨೦ ರ ರಾತ್ರಿ ೧೦.೩೦ಕ್ಕೆ ತನ್ನ ಮನೆಯಿಂದ ಹೊರಹೋದವರು ಹೆಮ್ಮಾಡಿಕುಂಬ್ರಿಯಲ್ಲಿ ಹೊಸದಾಗಿ ಕಟ್ಟುತ್ತಿರುವ ಬ್ರಿಡ್ಜ ಬಳಿಯ ಹಳ್ಳ ದಾಟುತ್ತಿರುವಾಗ ಆಕಸ್ಮತ್ತಾಗಿಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಮುಳುಗಿದ್ದರಿಂದ ಜೂ.೨೧ ಸಂಜೆ ಶವವಾಗಿ ಸಿಕ್ಕಿರುತ್ತಾರೆ ಈ ಕುರಿತು ಮೃತರ ಪುತ್ರ ವಿನಾಯಕ ಗೋಪಾಲ ನಾಯ್ಕ ಎಂಬುವರು ಯಲ್ಲಾಫುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Comment