• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಲಾಕ್ ಡೌನ ಸಡಿಲಿಕೆಯಿಂದನಿಧಾನವಾಗಿ ಮುರುಡೇಶ್ವರದತ್ತ ಮುಖ ಮಾಡುತ್ತಿದ್ದಾರೆ ಪ್ರವಾಸಿಗರ ದಂಡು

June 24, 2021 by bkl news Leave a Comment

ಭಟ್ಕಳ:  ಸತತ ಎರಡು ವರ್ಷಗಳ ಕಾಲ ಕೋವಿಡ್ ವೈರಸ್  ತನ್ನ ದಾಳಿಯಿಂದ ವ್ಯಾಪಾರ ವಹಿವಾಟು, ಉದ್ಯೋಗ, ಕೂಲಿ ಎಲ್ಲವನ್ನು ಕಸಿದುಕೊಂಡಿರುವದರ ಜೊತೆಗೆ ಪ್ರವಾಸೋದ್ಯಮಕ್ಕೂ ಭಾರಿ ಪೆಟ್ಟು ನೀಡಿದ್ದು, ಅದರಂತೆ ಎರಡನೇ ಅಲೆಯಿಂದಾಗ ಲಾಕ್ ಡೌನ ಆಗಿದ್ದ ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ನಿಧಾನವಾಗಿ ಪ್ರವಾಸಿಗರು ಅನ್ ಲಾಕ್ ನಿಂದಾಗಿ ಇತ್ತ ಕಡೆ ಮುಖ ಮಾಡುತ್ತಿದ್ದಾರೆ.

image editor output image85316054 1624528002995

ಕಳೆದ ವರ್ಷವೂ ಸಹ ಕೋವಿಡ್ ಜನರನ್ನು ಬಿಡದೇ ಕಾಡಿದ್ದು ಆಗಲೂ ಸಹ ಲಕ್ಷಗಟ್ಟಲೆ ಹಣವೂ ಪ್ರವಾಸೋದ್ಯಮದಿಂದ ನಷ್ಟ ಅನುಭವಿಸಿತ್ತು. ಈ ವರ್ಷದ ಸರಿಯಾದ ಬೇಸಿಗೆಯ ಅವಧಿ ಮಾರ್ಚ ಏಪ್ರಿಲ್ ತಿಂಗಳಿನಲ್ಲಿ ಪ್ರಕರಣ ಏರಿಕೆ ಕಂಡು ಬಂದ ಹಿನ್ನೆಲೆ ಸರಕಾರ ಲಾಕ್ ಡೌನ ಘೋಷಣೆ ಮಾಡಿತ್ತು. ಅದರಂತೆ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ವಿಶ್ವ ಪ್ರಸಿದ್ಧ ಮುರುಡೇಶ್ವರ ಸಹ ಲಾಕ್ ಡೌನನಿಂದ ಜನರಿಲ್ಲದೇ ಬಿಕೋ ಎಂದಿತ್ತು.

ಕಳೆದ ಒಂದೂವರೆ ತಿಂಗಳ‌ ಲಾಕ್ ಡೌನ ಬಳಿಕ ಸರಕಾರವೂ ಪ್ರಕರಣ ಹಾಗೂ ಪಾಸಿಟಿವಿಟಿ ದರ ಇಳಿಕೆಯಿರುವ ಜಿಲ್ಲೆಯಲ್ಲಿ ಲಾಕ್ ಡೌನ ಸಡಿಲಿಕೆ ನೀಡಿದ ಬೆನ್ನಲ್ಲೇ ಜನರಿಗೆ ಓಡಾಟ ನಡೆಸಲು ಅನುಕೂಲಕರವಾಗಿದೆ. ಇದು ಸದ್ಯ ಮುರುಡೇಶ್ವರದಲ್ಲಿ ಬಂದ್  ಆಗಿದ್ದ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡಲು ವ್ಯಾಪಾರಿಗಳಿಗೆ ಅನುಕೂಲ ವಾಗಿದ್ದ ಅತ್ತ ಪ್ರವಾಸಿಗರ ಬರುವಿಕೆಯೂ ಮುರುಡೇಶ್ವರದ ವ್ಯಾಪಾರಿಗಳಿಗೆ ಸಂತಸವಾಗಿದೆ.

ಇನ್ನು ಸರಕಾರದ ಲಾಕ್ ಡೌನ ಸಡಿಲಿಕೆಯನ್ನೇ ಸದುಪಯೋಗ ಪಡಿಸಿಕೊಂಡ ಜನರು ಮನೆಯಲ್ಲಿಯೇ ಕುಳಿತು ಬೇಸರ ಬಂದವರು ಪ್ರವಾಸಕ್ಕೆ ಹೊರಟಿದ್ದವರು ಸಹ ಇದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ‌ ಪ್ರವಾಸದ ಮಾರ್ಗ ಮಧ್ಯೆ ಮುರುಡೇಶ್ವರಕ್ಕೆ ಬರುವವರ ಸಂಖ್ಯೆಯ ಜೋರಾಗಿದ್ದು, ದೇವಸ್ಥಾನಕ್ಕೆ ಪ್ರವೇಶ ನಿರ್ಭಂದವಿದ್ದರು ಸಹ ಸಮುದ್ರದಲ್ಲಿ ಮೋಜು ಮಸ್ತಿ ಮಾಡಿ ಕೆಲ‌ಗಂಟೆಗಳ ಕಾಲ ಪೇಟೆಯಲ್ಲಿ ಸುತ್ತಾಡಿ ಮುಂದಿನ ಪ್ರಯಾಣ ಮುಂದುವರೆಸುತ್ತಿದ್ದಾರೆ. ಇನ್ನು ಸಮುದ್ರದ ನೀರಿನ ಮಟ್ಟ ಸಹ ಮುಂದೆ ಬಂದಿದ್ದು ಪ್ರವಾಸಿಗರು ಸಮುದ್ರಕ್ಕಿಳಿಯುವ ಮುನ್ನ ಎಚ್ಚರಿಕೆಯಿಂದ ನೀರಿಗಿಳಿಯಬೇಕಾಗಿದೆ.

ಸರಕಾರ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಲಾಡ್ಜ, ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿರುವುದು ಮುರುಡೇಶ್ವರದಲ್ಲಿನ ಲಾಡ್ಜ ರೆಸ್ಟೋರೆಂಟ್ ಮಾಲೀಕರಿಗೆ ಸಹಕಾರಿಯಾಗಿದೆ. ಸದ್ಯ ಬೇರೆ ಜಿಲ್ಲೆ ತಾಲೂಕಿನಿಂದ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾ ವಹಿಸಿ ಕೋವಿಡ್ ಮಾರ್ಗಸೂಚಿಯಂತೆ ಲಾಡ್ಜ, ರೆಸ್ಟೋರೆಂಟ್ ಮಾಲೀಕರು ರೂಮ್ ಸೌಲಭ್ಯ ನೀಡುತ್ತಿದ್ದಾರೆ.

ಅನ್ ಲಾಕ್ ದಿನದಿಂದ ಮುರುಡೇಶ್ವರದಲ್ಲಿ ವ್ಯಾಪಾರ ವಹಿವಾಟು ಜೋರಾಗಿದ್ದು ಬೆಳಿಗ್ಗೆ 6- ಸಂಜೆ 5 ಗಂಟೆಯ ಅವಧಿಯಲ್ಲಿ  ಜನರು ಪೇಟೆಯಲ್ಲಿ ಸೇರುತ್ತಿದ್ದು, ಇನ್ನಷ್ಟು ಸಡಿಲಿಕೆಗೆ ವ್ಯಾಪಾರಿಗಳು, ಲಾಡ್ಜ ರೆಸ್ಟೋರೆಂಟ್ ಮಾಲೀಕರು ಕಾತುರದಲ್ಲಿದ್ದಾರೆ. ಕಾರಣ ಪ್ರವಾಸಿಗರು ಬರುವ ಸರಿಯಾದ ಮಾರ್ಚ ಎಪ್ರಿಲ್ ಅವಧಿಯಲ್ಲಿ ಲಾಕ್ ಡೌನ ಆಗಿರುವದಿಂದ ಪ್ರವಾಸಿಗರಿಂದಲೇ ಜೀವನ ಕಟ್ಟಿಕೊಂಡಿರುವ ಸಾಕಷ್ಟು ಮಂದಿ ವ್ಯಾಪಾರಿಗಳಿಗೆ, ಇಲ್ಲಿನ ಸ್ಥಳೀಯ ಫೋಟೋಗ್ರಾಫರ್ಸ ಗಳಿಗೆ ಗಳಿಕೆ ಇಲ್ಲದೇ ಜೀವನ ಕಷ್ಟವಾಗಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಾದರೆ ಸಡಿಲಿಕೆ ಸಂಪೂರ್ಣ ತೆರವಾದರೆ ಮಾತ್ರ ಸಾಧ್ಯ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

8, 10 ನೇ ತರಗತಿ / iti / ಡಿಪ್ಲೊಮ ಆದವರಿಗೆ ಮಜಗಾನ್ ಡಾಕ್‌ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಬೃಹತ್‌ ನೇಮಕಾತಿ/mazagon dock recruitment 2021

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,129 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...