ಭಟ್ಕಳ: ತಾಲೂಕಿನ ಸಾಗರ ರಸ್ತೆಯ ಕೋಣಾರ ಗುಡ್ಡದ ನಿರ್ಜನ ಪ್ರದೇಶದಲ್ಲಿ 2012ರಲ್ಲಿ ನಡೆದಿದ್ದ ಕಲ್ಪನಾ ಮಹಾಲೆ ಕೊಲೆ ಪ್ರಕರಣ ಸಂಬAಧ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ.
2012ರ ನವೆಂಬರ್ 4ರಂದು ಕಲ್ಪನಾ ಮಹಾಲೆ ಎನ್ನುವ ಮಹಿಳೆಯ ಕೊಲೆ ನಡೆದಿತ್ತು. ಪ್ರಕರಣದಲ್ಲಿ ತಾಲೂಕಿನ ಮುಂಡಳ್ಳಿಯ ಸದಾಶಿವ ನಾಯ್ಕ ಹಾಗೂ ನಾಗರಾಜ ನಾಯ್ಕ ಎನ್ನುವವರನ್ನ ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಆರೋಪಿಗಳನ್ನ ದೋಷಮುಕ್ತ ಮಾಡಿ 2018ರ ಮಾರ್ಚ್ 26ರಂದು ಆದೇಶ ಹೊರಡಿಸಿದ್ದರು.
ಈ ಸಂಬAಧ ಸರ್ಕಾರ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದು, ವಿಡಿಯೋ ಕಾನ್ಛರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎಂ.ಖಾಜೀ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿ, ಕಾರವಾರ ಸೆಷನ್ ನ್ಯಾಯಾಧೀಶರು ನೀಡಿದ್ದ ತೀರ್ಪನ್ನ ಎತ್ತಿ ಹಿಡಿದಿದೆ. ಆರೋಪಿಗಳ ಪರವಾಗಿ ಕುಂದಾಪುರದ ವಕೀಲ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.
Leave a Comment