ನರೇಗಾ ಯೋಜನೆಯಡಿ ಜಿಲ್ಲೆಯ 8 ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರೀಯಾಂಗ ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಹತೆ; ಕನಿಷ್ಠ 10ನೇ ತರಗತಿ ಉತ್ತಿರ್ಣರಾಗಿರಬೇಕು.
ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುವರಾಗಿರಬೇಕು ಮತ್ತು ಕ್ರೀಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು.
ವಯೋಮಾನ; 45 ವರ್ಷ ದೊಳಗಿನವರಾಗಿದ್ದು, ಕಳೆದ 3 ವರ್ಷಗಳ ಅವಧಿಯಲ್ಲಿ ಕನಿಷ್ಠ 2 ವರ್ಷ ಯೋಜನೆಯಡಿ ಅಕುಶಲ ಕಾರ್ಮಿಕರಾಗಿ ಕೆಲಸ ನಿರ್ವಹಿಸಿರÀಬೇಕು.
ಯಲ್ಲಾಪುರ ತಾಲೂಕಿನ ಇಡಗುಂದಿ, ಕುಂದರಗಿ ಮತ್ತು ಮಾವಿನಮನೆ. ಮುಂಡಗೋಡ ತಾಲೂಕಿನ ಹನುಮಾಪುರ, ಇಂದೂರು. ಶಿರಸಿಯ ಬದನಗೋಡ, ಹಳಿಯಾಳದ ಗುಂಡೊಳ್ಳಿ ಹಾಗೂ ಕಾರವಾರದ ದೇವಳಮಕ್ಕಿ ಗ್ರಾಮ ಪಂಚಾಯತ್ಗಳಲ್ಲಿನ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಮಾಸಿಕ ಗೌರವ ಧನ 6 ಸಾವಿರ ಹಾಗೂ ಕಾರ್ಯನಿರ್ವಹಣೆ ಆಧರಿಸಿ 5 ಸಾವಿರ ಪ್ರೋತ್ಸಾಹ ಧನವಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ; 7-7-2021
ಹೆಚ್ಚಿನ ಮಾಹಿತಿಗಾಗಿ ;
ಯಲ್ಲಾಪುರ(08419-261130), ಮುಂಡಗೋಡ(08301-22212), ಶಿರಸಿ(08384-22642)
ಹಳಿಯಾಳ(08284-220135), ಕಾರವಾರ(08382-22389) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹು ಎಂದಿದ್ದಾರೆ.
Leave a Comment