ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತ ಅಭಿಯಾನದ PMFME ಯೋಜನೆಯಡಿ ಹೊಸ ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸಲು ಹಾಗೂ ಹಾಲಿ ಉದ್ದಿಮೆಗಳನ್ನು ಮೇಲ್ದರ್ಜೆಗೇರಿಸಲು ಅರ್ಜಿ ಆಹ್ವಾನಿಸಲಾಗಿದೆ. ಹೊಸ ಉದ್ದಿಮೆ ಸ್ಥಾಪನೆಗಾಗಿ ‘ಒಂದು ಜಿಲ್ಲೆ-ಒಂದು ಉತ್ಪನ್ನ’ ಎಂಬ ಪರಿಕಲ್ಪನೆಯೊಂದಿಗೆ ಜಿಲ್ಲಾವಾರು ಬೆಳೆ ವಿಂಗಡಣೆ ಮಾಡಲಾಗಿದ್ದೂ, ಉತ್ತರ ಕನ್ನಡಕ್ಕೆ ‘ಸಾಂಬಾರು ಬೆಳೆ’ಗಳನ್ನು ನಿಗದಿಸಲಾಗಿದೆ.

ಸಾಂಬಾರು ಪದಾರ್ಥಗಳ ಸಂಸ್ಕರಣೆ ಅಥವಾ ಮೌಲ್ಯವರ್ಧನೆಗೆ ಸಂಬಂಧಿಸಿದ ಯಂತ್ರೋಪಕರಣ ಖರೀದಿ, ಕಟ್ಟಡ ನಿರ್ಮಾಣ, ಮೂಲಸೌಕರ್ಯ ರಚನೆ, ಪ್ಯಾಕಿಂಗ್, ಬ್ರಾಂಡಿಂಗ್, ಮಾರ್ಕೆಟಿಂಗ್, ರಫ್ತಿಗೆ ಯೋಜನಾ ಮೊತ್ತದ 35%, ಗರಿಷ್ಠ 10 ಲಕ್ಷದ ವರೆಗೆ ಸಹಾಯಧನ ಲಭ್ಯವಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಬೆಳೆಗೆ ಸಂಬಂಧ ಪಟ್ಟ ಉದ್ದಿಮೆಯನ್ನ ಉನ್ನತೀಕರಿಸಲೂ 35% ಅಥವಾ ಗರಿಷ್ಟ 10 ಲಕ್ಷದ ಸಹಾಯಧನ ನೀಡಲಾಗುತ್ತಿದೆ.
ವ್ಯಕ್ತಿ, ಸಹಕಾರಿ ಸಂಸ್ಥೆ, ಸ್ವ ಸಹಾಯ ಸಂಘ, ಎಫ್. ಪಿ. ಓ ಗಳು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿವೆ. ಉದ್ದಿಮೆಗಳನ್ನು ನಿಯಮಬದ್ಧಗೊಳಿಸಲು ಅವಶ್ಯವಾದ ಜಿ.ಎಸ್. ಟಿ, ಎಫ್.ಎಸ್.ಎಸ್.ಎ.ಐ ಲೈಸನ್ಸ್, ಉದ್ಯಮ ಆಧಾರಗಳ ಬಗ್ಗೆ ಮಾಹಿತಿ, ಪ್ರೊಜೆಕ್ಟ್ ರಿಪೋರ್ಟ್ ತಯಾರಿಕೆ, ಬ್ಯಾಂಕ್ ಸಾಲ, ಉಳಿದಂತಹ ತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸುವವರು ಕನಿಷ್ಟ ಎಂಟನೇ ತರಗತಿ ತೇರ್ಗಡೆಯಾಗಿರಬೇಕು, ಕಡ್ಡಾಯವಾಗಿ ಬ್ಯಾಂಕ್ ಲೋನ್ ಪಡೆಯಲು ಇಚ್ಚಿಸುವವರಾಗಿರಬೇಕು. ಅರ್ಜಿ ಅಂತರ್ಜಾಲದಲ್ಲಿ (pmfme.mofpi.gov.in) ಲಭ್ಯವಿದ್ದೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ/ತೋಟಗಾರಿಕಾ ಇಲಾಖೆ ಅಥವಾ PMFME ಸಂಪನ್ಮೂಲ ವ್ಯಕ್ತಿ ಸುಜಯ್ ಭಟ್ಟ ಅವರನ್ನು ಸಂಪರ್ಕಿಸಬಹುದು (9482287323 – ಸಂಪರ್ಕ ಸಮಯ ಬೆಳಿಗ್ಗೆ 9ರಿಂದ ಸಂಜೆ 5)
Leave a Comment