ಹೊನ್ನಾವರ :ತಾಲೂಕಿನ ಕಾಸರಕೋಡ್ ನಲ್ಲಿ ನಿರ್ಮಾಣವಾಗುತ್ತಿರುವ ಉದ್ದೇಶಿತ ವಾಣಿಜ್ಯ ಬಂದರು ಸ್ಥಳದಲ್ಲಿ ಮೀನುಗಾರಿಕೆಗೆ ತೊಡಕುಂಟಾಗುತ್ತಿರುವ ಹಿನ್ನಲೆ ಕಂಗಾಲಾಗಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಅಂತರಾಷ್ಟ್ರೀಯ ಬ್ಲೂ ಪ್ಲ್ಯಾಗ್ ಮಾನ್ಯತೆ ಹೊಂದಿರುವ ಇಕೋ ಬೀಚ್ ನಲ್ಲಿ ನಾಡದೋಣಿಗಳನ್ನು ಲಂಗರು ಹಾಕುವ ಮೂಲಕ ಸರ್ಕಾರ ತಮ್ಮ ಅಳಲನ್ನು ಕೇಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.

ಮಳೆಗಾಲದ ಎರಡು ತಿಂಗಳ ಅವಧಿಯಲ್ಲಿ ನಾಡದೋಣಿಗಳು ಮೂಲಕ ಮೀನುಗಾರಿಕೆ ನಡೆಸುವರು ಸಮುದ್ರ ತಟದಲ್ಲಿ ದೋಣಿಗಳನ್ನು ಲಂಗರು ಹಾಕಬೇಕಾಗುತ್ತದೆ. ಬಂದರು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೋಣಿಗಳನ್ನು ಲಂಗರು ಹಾಕಲು ಸಮಸ್ಯೆಯಾಗುತ್ತಿದೆ ಇದನ್ನು ಮನಗಂಡ ಮೀನುಗಾರರು ದೋಣಿಗಳನ್ನು ಇಕೋ ಬೀಚ್ ನಲ್ಲಿ ಇಟ್ಟಿದ್ದಾರೆ.
ಈ ಪ್ರದೇಶಗಳಲ್ಲಿ 800ಕ್ಕೂ ಅಧಿಕ ನಾಡದೋಣಿಗಳಿದ್ದು ಮುಂದಿನ ದಿನಗಳಲ್ಲಿ ವಾಣಿಜ್ಯ ಬಂದರು ಸಮಸ್ಯೆ ಗಂಭೀರವಾದಲ್ಲಿ ಮೀನುಗಾರರು ದೋಣಿಗಳನ್ನು ಲಂಗರು ಹಾಕಲು ಇಕೋ ಬೀಚ್ ಮತ್ತಿತರ ಪ್ರದೇಶ ಅವಲಂಬಿಸಬೇಕಾಗುತ್ತದೆ ಸರ್ಕಾರ ಹಾಗೂ ಅಧಿಕಾರಿಗಳು ಮೀನುಗಾರರ ಈ ಸಮಸ್ಯೆಯನ್ನು ಬಗೆಹರಿಸಿ ಮೀನುಗಾರಿಕೆ ತೊಂದರೆಯಾಗದಂತೆ ಬಂದರು ನಿರ್ಮಾಣ ಕಾಮಗಾರಿಯತ್ತ ಗಮನಹರಿಸಬೇಕಿದೆ.
Leave a Comment