ದಾಂಡೇಲಿ; ದೇಶಪಾಂಡೆ ನಗರದ ಜನವಸತಿ ಪ್ರದೇಶದಲ್ಲಿ ಅರ್ಧಬೆಂದ ತಲೆಬುರುಡೆ ಯೊಂದು ಗುರುವಾರ ಬೆಳಗ್ಗೆ ಬೆಳ್ಳಂಬೆಳಗ್ಗೆ ಪತ್ತೆಯಾಗಿದ್ದು , ಸ್ಥಳೀಯರಲ್ಲಿ ಆತಂಕ ಉಂಟುಮಾಡಿತ್ತು, ನಗರದ ಪಕ್ಕದ ಪಟೇಲ ನಗರದ ರುದ್ರಭೂಮಿಯಲ್ಲಿ ಅರ್ಧ ಬೆಂದಿರುವ ತಲೆಬುರುಡೆ ಇದಾಗಿದೆ ಎನ್ನಲಾಗಿದೆ . ನಾಯಿಗಳು ಆಹಾರವನ್ನು ಅರಸಿ ರುದ್ರಭೂಮಿಗೆ ಹೋಗಿ ಅಲ್ಲಿ ಮೃತವ್ಯಕ್ತಿಯ ಅರೆಬೆಂದ ಶರೀರದಿಂದ ಭಾಗಗಳನ್ನು ಹೊತ್ತು ತರುತ್ತಿದ್ದು , ಹೀಗೆ ತಿಂದುಳಿದ ಭಾಗಗಳನ್ನು ಅಲ್ಲಲ್ಲಿ ಚೆಲ್ಲಾಪಿಲ್ಲಿ ಹರಡಿಸುತ್ತಿವೆ ಇದರಿಂದ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ,
Leave a Comment