ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ವ್ಯವಸ್ಥೆಯ ವಿಥ್ ಡ್ರಾ ದರದಲ್ಲಿ ಬದಲಾವಣೆ ತರಲಾಗುತ್ತಿದೆ. ನಾಲ್ಕು ಬಾರಿ ಮಾತ್ರ ಉಚಿತವಾಗಿ ಎಸ್ಟಿಬಿ ಎಟಿಎಂನಿಂದ ವಿಥ್ ಡ್ರಾ ಮಾಡಿಕೊಳ್ಳಬಹುದು. ನಂತರದ ಎಲ್ಲಾ ವಿಥ್ ಡ್ರಾ ಮೇಲೆ 15 ರು ಪ್ಲಸ್ ಜಿಎಸ್ ಟಿ ವಿಧಿಸಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಳಿತಾಯ ಖಾತೆ ಗ್ರಾಹಕರು ಬಳಸುವ ಚೆಕ್ ಲೀಫ್ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಜುಲೈ 1 ರಿಂದ ಚೆಕ್ ಲೀಫ್ ಬಳಕೆ ಮಿತಿಗೊಳಿಸಲಾಗಿದ್ದು, ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಖಾತೆದಾರರು ಆರ್ಥಿಕ ವರ್ಷದಲ್ಲಿ 10 ಚೆಕ್ ಲೀಫ್ ಬಳಸಲು ಅನುಮತಿ ಇರುತ್ತದೆ. ಇದರ ನಂತರ ಬಳಸಿದರೆ 40 ರು ಪ್ಲಸ್ ಜಿಎಸ್ಟಿ (ಪ್ರತಿ 10 ಲೀಫ್ ನಂತೆ) ಹಾಗೂ 75 ರು ಪ್ಲಸ್ ಜಿಎಸ್ಟಿ (ಪ್ರತಿ 25 ಲೀಫ್ ನಂತೆ) ಶುಲ್ಕ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಈ ಶುಲ್ಕ ಅನ್ವಯವಾಗುವುದಿಲ್ಲ.
Leave a Comment