ಹೊನ್ನಾವರ ತಾಲೂಕಿನ ಜಲವಳ್ಳಿ ಪಂಚಾಯತಿ ವ್ಯಾಪ್ತಿಯ ೫ ಲಕ್ಷ ವೆಚ್ಚದ ಪಡುಕುಳಿ ನಾಗಯ್ಯನ ಹಿತ್ತಲಕೇರಿ ರಸ್ತೆ, ೨೫ ಲಕ್ಷ ವೆಚ್ಚದ ಸಾಮಿತ್ಲಕೇರಿ ರಸ್ತೆ ನಿರ್ಮಾಣ ಕಾಮಗಾರಿ ೫ ಲಕ್ಷ ವೆಚ್ಚದ ಕುಪ್ಪಗೌಡರಕೇರಿ ಸಂಪರ್ಕಿಸುವ ಕಾಲು ಸಂಖ ನಿರ್ಮಾಣ ಕಾಮಗಾರಿಗೆ ಭಟ್ಕಳ ಹೊನ್ನಾವರ ಶಾಸಕ ಸುನೀಲ ನಾಯ್ಕ ಚಾಲನೆ ನೀಡಿದರು.

ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಕೊರೋನಾ ಹಿನ್ನಲೆಯಲ್ಲಿ ಹಲವು ರಸ್ತೆ ಸೇರಿದಂತೆ ಸರ್ಕಾರದ ವಿವಿಧ ಕಾಮಗಾರಿಗಳು ವಿಳಂಬವಾಗಿದೆ. ಆದರೂ ಗ್ರಾಮೀಣ ಭಾಗದ ರಸ್ತೆ , ಸೇತುವೆ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿದೆ. ಮುಮನದಿನ ಗ್ರಾಮೀಣ ಭಾಗದ ಸರ್ವತೋಮಕ ಅಭಿವೃದ್ಧಿಗೆ ಶ್ರಮಿಸುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು,ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Leave a Comment