ಕುಮಟಾ ಪಟ್ಟಣದ ಮೂರೂರು ರಸ್ತೆಯಲ್ಲಿ ನೂತನವಾಗಿ ಆರಂಭವಾದ ಸರಸ್ವತಿ ಮಣ್ಣು ಹಾಗೂ ನೀರು ಪರೀಕ್ಷಾ ಕೇಂದ್ರವನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು . ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಶಾಪುರ ಮಠ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಅಕ್ರಂ ಆಲಕಟ್ಟಿ , ಮುಖಂಡರಾದ ಪ್ರಶಾಂತ್ ನಾಯಕ್ ಹೇಮಂತ್ ಗಾoವಕರ್ ವಿಶ್ವನಾಥ್ ನಾಯ್ಕ ಹಾಜರಿದ್ದರು.

ರೈತರು ತಮ್ಮ ತೋಟದ ಅಥವಾ ಗದ್ದೆಯ ಮಣ್ಣನ್ನು ಪರೀಕ್ಷೆ ಮಾಡಿಸುವುದರಿಂದ ಹೆಚ್ಚಿನ ಬೆಳೆಯನ್ನು ಬೆಳೆಯಲು ಹಾಗೂ ಮಣ್ಣಿನ ಫಲವತ್ತತೆಯನ್ನು ತಿಳಿಯಲು ಸಹಾಯಕಾರಿಯಾಗಲಿದೆ .ತೋಟದ ಅಥವಾ ಗದ್ದೆಯ ಮಣ್ಣನ್ನು ಹಾಗೂ ಬಾವಿ ಅಥವಾ ನೀರಿನ ಪರೀಕ್ಷೆಯನ್ನು ಈ ಕೇಂದ್ರದಲ್ಲಿ ಮಾಡಲಾಗುತ್ತಿದ್ದು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೇಂದ್ರದ ಮಾಲಕ ಅಣ್ಣಪ್ಪ ನಾಯ್ಕ ತಿಳಿಸಿದ್ದಾರೆ.
mob;9731695205
Leave a Comment