ಕಾರವಾರ; ಪಡಿತರಚೀಟಿ ಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಕೆವೈಸಿ ಸಂಗ್ರಹಣೆ ಮಾಡುವ ಕಾರ್ಯ ಜು. 10ರವರೆಗೆ ಮಾತ್ರ ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿ ಚಾಲ್ತಿಯಲ್ಲಿರುತ್ತದೆ .
ಹೀಗಾಗಿ ಇದುವರೆಗೂ ಇ-ಕೆವೈಸಿ ಮಾಡಿಕೊಳ್ಳದೆ ಇರುವ ಸದಸ್ಯರು ತಮ್ಮ ಪಡಿತರ ಚೀಟಿ ಆಧಾರ್ ಕಾರ್ಡ್ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಸಿಲೆಂಡರ್ ಗ್ಯಾಸ್ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರಗಳೊಂದಿಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ.
ಇ-ಕೆವೈಸಿ ಮಾಡಿಕೊಳ್ಳದೆ ಇದ್ದ ಬಿಪಿಎಲ್ ಪರಿತರ ಚೀಟಿಯಲ್ಲಿರುವ ಸದಸ್ಯರ ಪಡಿತರವನ್ನು ಮುಂದಿನ ತಿಂಗಳಿನಲ್ಲಿ ಕಡಿತಗೊಳಿಸಲಾಗುವುದು ಹಾಗಾಗಿ ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಪಡಿತರ ಚೀಟಿ ಯಲ್ಲಿರುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಯನ್ನು ಮಾಡಿಕೊಳ್ಳುವಂತೆ ತಸಿಲ್ದಾರ್ ನಿಶ್ಚಲ್ ನರೋನಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ .
Leave a Comment