ಭಟ್ಕಳ: ಪಟ್ಟಣದ ರಂಗಿನಕಟ್ಟೆಯಲ್ಲಿರುವ ಭಟ್ಕಳ ನ್ಯಾಯಾಲಯದಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅವಘಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಚೇರಿ ಯಾವುದೇ ಕಡತಗಳಿಗೆ ಹಾನಿಯಾಗಿದೇ ಅವೆಲ್ಲವು ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರಕಿದೆ.
ಇಲ್ಲಿನ ಜೆಎಂಎಫ್‌ಸಿ ನ್ಯಾಯಲಯದ ಕಟ್ಟಡಕ್ಕೆ ಶುಕ್ರವಾರ ಬೆಳಗ್ಗಿನ ಜಾವ ಕಟ್ಟಡದ ಮುಂಭಾಗಕ್ಕೆ ಬೆಂಕಿ ತಗುಲಿ ಪೀಠೋಪಕರಣ ಹಾಗೂ ಹಲವು ದಾಖಲೆಗಳು ಸುಟ್ಟು ಹೋಗಿದೆ ಎಂದು ವರದಿ ಆಗಿತ್ತು. ನಂತರ ಪರೀಶೀಲಿಸಿದಾಗ ಭಟ್ಕಳ ನ್ಯಾಯಾಲಯದಲ್ಲಿ ಸಂಭವಿಸಿದ ಅಗ್ನಿ ಅವಘಡದ ಪ್ರಕರಣಕ್ಕೆ ಸಂಬಂಧಿಸಿದ , ಕಚೇರಿ ಕಡತಗಳಿಗೆ ಹಾನಿಯಾಗದೆ, ಅವೆಲ್ಲವು ಸುರಕ್ಷಿತವಾಗಿದೆ ಎಂದು ತಿಳಿದು ಬಂದಿದೆ.
Leave a Comment