ದಾವಣಗೆರೆ;
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ಅವರ ಫೇಸ್ ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ . ಈ ಕುರಿತು ಸ್ವತಹ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ .ರಿಷ್ಯಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದು, ಜಿಲ್ಲಾ ಪೊಲೀಸ್ ಇಲಾಖೆಯ ಎಸ್ ಪಿ, ದಾವಣಗೆರೆ ,ಎಸ್ ಪಿ, ಡಿವಿಜಿ ಹೆಸ ರಿನ ಇಲಾಖೆಯ ಅಧಿಕೃತ ಖಾತೆ ಹೆಸರಲ್ಲಿ ದುಷ್ಕರ್ಮಿಗಳು ನಕಲಿ ಖಾತೆ ಸೃಷ್ಟಿಸಿದ್ದಾರೆ. ಅವರು ಇತರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇಟ್ಟಿದ್ದಾರೆ.

ಅಲ್ಲದೆ ಎಸ್ಪಿ ಸಿ.ಬಿ.ರಿಪ್ಯಂತ್ ಹೆಸರಲ್ಲಿ (08099727196)ಈ ನಂಬರ್ ನಿಂದ ಕರೆ ಅಥವಾ ಸಂದೇಶ ಕಳುಹಿಸಿ ವಿವಿಧ ರೀತಿಯ ಸಹಾಯ ಹಾಗೂ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಾರ್ವಜನಿಕರು ಈ ನಕಲಿ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಲ್ಲಿ ಅಥವಾ ಹಣಕ್ಕೆ ಬೇಡಿಕೆ ಇಟ್ಟಲ್ಲಿ ಅದನ್ನು ತಳ್ಳಿಹಾಕುವಂತೆ ಹಾಗೂ ಜಾಗೃತರಾಗಿರುವಂತೆ ಎಸ್ಪಿ ಮನವಿ ಮಾಡಿದ್ದಾರೆ.
Leave a Comment