ಹೊನ್ನಾವರ ‘ತಾಲೂಕಿನ ಕೆಳಗಿನೂರು ಗ್ರಾಮದ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ ಇನ್ವೆಸ್ಟಿಗೇಶನ್ ಆಫ್ ನ್ಯಾನೋ ಸ್ಕೇಲ್ ಕ್ರಿಸ್ಟೊ ಲೋ ಗ್ರಾಫಿಕ್ ಪೇಸಸ್ ಆ್ಯಂಡ್ ಆಲಾಯ್ ಎಂಬ ಮಹಾ ಪ್ರಬಂಧಕ್ಕೆ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟ್ ಫಿಕ್ ರಿಸರ್ಚ್ ಬೆಂಗಳೂರು ಇವರು ಜು.1ರಂದು ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದಾರೆ.
ಡಾII ಶರೋನಾ ಥಾಮಸ್ ಹೊರ್ಟಾ ಮೂಲತಃ ಹೊನ್ನಾವರ ತಾಲೂಕಿನ ಕೆಳಗಿ ನೂರು ಗ್ರಾಮದ ಶಿಕ್ಷಕ ದಂಪತಿಗಳಾದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಥಾಮಸ್ ಹೊರ್ಟಾ ಹಾಗೂ ಶ್ರೀಮತಿ ಮೇಬಲ್ ಹೊರ್ಟಾ ಇವರ ಹಿರಿಯ ಪುತ್ರಿ. ಬಾಲ್ಯದಿಂದಲೂ ತುಂಬಾ ಪ್ರತಿ ಭಾವಂತಳಾದ ಇವರು ತಮ್ಮ ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ತವರೂರಿನಲ್ಲಿಯೇ ಮುಗಿಸಿರುತ್ತಾರೆ.
ನಂತರ ಹೊನ್ನಾವರ ಎಸ್. ಡಿ. ಎಂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿಯನ್ನು ಕಾಲೇಜಿಗೆ ಪ್ರಥಮ ಹಾಗೂ ಯುನಿವರ್ಸಿಟಿಗೆ ‘ ನಾಲ್ಕನೇ ರ‍್ಯಾಂಕ್ ಪಡೆದಿರುತ್ತಾರೆ. ಕರ್ನಾಟಕ ಯುನಿವಸಿಟಿ ಧಾರವಾಡದಲ್ಲಿ ಎಂ. ಎಸ್ಸಿ ಇನ್ ಫಿಜಿಕ್ಸ್ ಪದವಿಯನ್ನು ಪ್ರಥಮ ರ‍್ಯಾಂಕ್ ನೊಂದಿಗೆ ಚಿನ್ನದ ಪದಕವನ್ನು ಪಡೆದ್ದಿರುತ್ತಾರೆ .
ನಂತರ ಜೆ.ಆರ್, ಎಪ್ ( ಜ್ಯೂನಿಯರ್ ರಿಸಚ್ ೯ ಫಿಲೊಶಿಪ್) ಪರೀಕ್ಷೆಯಲ್ಲಿ ಉತ್ತಿಣ ೯ ರಾಗಿ ಆಯ್. ಆಯ್ .ಎಸ್ಸಿ ಬೆಂಗಳೂರಿನಲ್ಲಿ ಒಂದು ವರ್ಷ ಕೊರ್ಸ್ ವರ್ಕನ್ನು ಎ ಗ್ರೇಡ್ ನೊಂದಿಗೆ ಉತ್ತೀಣರಾಗಿ ಜವಹರಲಾಲ್ ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸಚ್೯ ಬೆಂಗಳೂರು ಇಲ್ಲಿ ಡಾII ರಂಜನ್ ದತ್ತ ಇವರ ಮಾರ್ಗ ದರ್ಶನದಲ್ಲಿ ಮಹಾ ಪ್ರಬಂಧನ ಮಂಡಿಸಿದ್ದಾರೆ.
Leave a Comment