ಭಟ್ಕಳ:ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮಾರನ ಬಲೆಯನ್ನು ಬಿಡುವಾಗ ಸುಮುದ್ರ ಅಲೆ ಬಡಿದು ಕಾಲು ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಲೂರಿನ ಸಮುದ್ರ ದಡದಲ್ಲಿ ನಡೆದಿದೆ.
ಮೃತ ಮೀನುಗಾರ ಕೃಷ್ಣ ಜಟ್ಟಪ್ಪ ಹರಿಕಾಂತ ಎಂದು ತಿಳಿದು ಬಂದಿದೆ. ತನ್ನ ಸಂಬಂದಿಕರೊಬ್ಬ ಜೊತೆಗೂಡಿ ಅವರ ಮನೆ ಸಮೀಪವಿರುವ ಗಾಳಿಗಿಡ ಬೈಲೂರಿನ ಸಮುದ್ರ ತೀರದಲ್ಲಿ ಮಾರನ ಬಲೆ ಬಿಡುತ್ತಿರುವಾಗ ಸುಮುದ್ರ ಅಲೆ ಬಡಿದು ಕಾಲು ತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟದ್ದಾನೆ.
ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ
Leave a Comment