ಹೊನ್ನಾವರ : ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಶಿರಸಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಹಮ್ಮಿಕೊಂಡಿರುವ ಸೈಕಲ್ ಜಾಥಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಇಂದು ಉಡುಪಿಯಿಂದ ಹೊನ್ನಾವರ ಮಾರ್ಗದಲ್ಲಿ ತೆರಳುತ್ತಿರುವ ಸಂದರ್ಭದಲ್ಲಿ ನಗರದ ಶರಾವತಿ ಸರ್ಕಲ್ ಬಳಿ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ನೇತೃತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟಿ, ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ, ಯುವ ಕಾಂಗ್ರೇಸ್ ಅಧ್ಯಕ್ಷ ಸಂದೇಶ ಶೆಟ್ಟಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರೀಯಾ ಶೇಖ್, ಸೇವಾದಳ ಅಧ್ಯಕ್ಷ ಸಂತೋಷ ಮೇಸ್ತ, ಪಕ್ಷದ ಮುಖಂಡರಾದ ದಾಮೋದರ ನಾಯ್ಕ, ಬಾಲಚಂದ್ರ ನಾಯ್ಕ, ಹನೀಫ್ ಶೇಖ್, ಚಂದ್ರಶೇಖರ ಚಾರೋಡಿ, ಉದಯ ಮೇಸ್ತ, ಕೃಷ್ಣ ಹರಿಜನ್, ನೆಲ್ಸನ್ ರೊಡ್ರಗಿಸ್, ಜೋಸೆಫ್ ಡಿಸೋಜಾ, ಗಜು ನಾಯ್ಕ, ಮಂಜು ಖಾರ್ವಿ, ಕೃಷ್ಣ ಮಾರಿಮನೆ, ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡು ಸ್ವಾಗತ ಕೋರಿದರು.
Leave a Comment