ನವದೆಹಲಿ:
ದೆಹಲಿಯ ಅಪರಾಧ ವಿಭಾಗದ ಪೊಲೀಸ್ ರು ಎರಡು ನಕಲಿ ಕಾಲ್ ಸೆಂಟರ್ ಗಳ ಮೇಲೆ ದಾಳಿ ನಡೆಸಿ ಸುಮಾರು
94 ಜನರನ್ನು ಬಂಧಿಸಿದ್ದಾರೆ. ಕೀರ್ತಿನಗರ ಮತ್ತು ಮ್ಯಾಂಗೋಲ್ಪುರಿ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ
ಕಾಲ್ ಸೆಂಟರ್ ಗಳ ಬಗ್ಗೆ ಮಾಹಿತಿ ಕಲೆ ಹಾಕಿ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಬಂಧಿತರಲ್ಲಿ 20 ಮಹಿಳೆಯರು ಕೂಡ ಇದ್ದಾರೆ ಎಂದು ತಿಳಿದು ಬಂದಿದ್ದು, ಈ ಕೇಂದ್ರಗಳಲ್ಲಿ ಅಮೆರಿಕ ಮೂಲದವರನ್ನು
ಟಾರ್ಗೆಟ್ ಮಾಡಿ ಅವರನ್ನು ವಂಚಿಸುತ್ತಿದ್ದರು ಎಂದು ಪೊಲೀಸ್ ರು ತಿಳಿಸಿದ್ದಾರೆ.
.
Leave a Comment