ಭಟ್ಕಳ:ತಾಲೂಕಿನ ಮಾರುಕೇರಿ ಗ್ರಾ.ಪಂ ವ್ಯಾಪ್ತಿಯ ಕೋಟಖಂಡ ಮಾಲ್ಕಿ ಜಮೀನಿನಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಾಗೂ ಕಂದಾಯ ಇಲಾಖೆಯ ತಂಡ ದಿಢೀರ್ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ವಸಂತ ನಾಯ್ಕ ಮತ್ತು ಮಂಜಪ್ಪ ನಾಯ್ಕ ಮಾಲೀಕತ್ವದಲ್ಲಿ ಕಳೆದ ಎರಡು ಮೂರು ವರ್ಷದಿಂದ ಈ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು.ದಾಳಿ ನಡೆಸಿದ ಅಧಿಕಾರಿಗಳಿಂದ ಗಣಿಗಾರಿಕೆಗೆ ಬೇಕಾದ ಪರವಾನಗಿ ಪತ್ರ ಸೇರಿ ವಿವಿಧ ದಾಖಲೆ ಪರಿಶೀಲಿಸಿದಾಗಪರವಾನಗಿ ನವೀಕರಿಸದೆ ಗಣಿಗಾರಿಕೆ ನಡೆಸುತ್ತಿರೋದು ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಈ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ದೂರುಗಳು ಬರುತ್ತಿದ್ದು ಆಧಿಕಾರಿಗಳು ಗಣಿಗಾರಿಕೆ ನಡೆಸದಂತೆ ಎಚ್ಚರಿಕೆ ನೀಡಿದರು ಸಹ ನಿಲ್ಲಿಸದೆ ಇರುವ ಕಾರಣ ಕಾರವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 2 ಟ್ರೆಲರ್ ಮಷಿನ್, ಕೆಂಪುಕಲ್ಲು ಸಾಗಾಣ ಮಾಡುತ್ತಿದ್ದ 3 ವಾಹನಗಳ ವಶಕ್ಕೆ ಪಡೆದುಕೊಂಡಿದ್ದಾರೆ .
ನಂತರ ದಾಳಿಯಲ್ಲಿ ವಶಪಡಿಸಿಕೊಂಡ ಯಂತ್ರಗಳು ಮತ್ತು ಮೂರು ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗ್ರಾಮೀಣ ಪೋಲಿಸ್ ಠಾಣೆ ವಶಕ್ಕೆ ನೀಡಿದ್ದಾರೆ
ಕಾರ್ಯಚರಣೆಯಲ್ಲಿ ಭೂ ಮತ್ತು ಗಣೆಗಾರಿಕೆ ಇಲಾಖೆ ಅಧಿಕಾರಿ ಜಯರಾಮ ನಾಯ್ಕ, ಕಂದಾಯ ನೀರಿಕ್ಷಕ ಕೆ ಶಂಭು, ಗ್ರಾಮ ಲೆಕ್ಕಾಧಿಕಾರಿಗಳಾದ ವಿಶ್ವನಾಥ ಗಾವಂಕರ, ಚಾಂದ್ ಬಾಷ ಮುಂತಾದವರು ಉಪಸ್ಥಿತರಿದ್ದರು.
Leave a Comment