;
ತಾಯಿಯ ಪಕ್ಕದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಗುರುವಾರ ಮಧ್ಯಾಹ್ನ ಹುಚ್ಚುನಾಯಿ ಒಂದು ಕಚ್ಚಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ನಡೆದಿದೆ. ಶಿಡ್ಲ ಗುಂಡಿ ಬ್ರಿಡ್ಜ್ ಬಳಿಯ ನಿವಾಸಿ ಮನೋಜ್ ಕುಮಾರ್ 2 ಎಂಬಾತನಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ.
ಈತ ಬಟ್ಟೆ ಒಗೆಯುತ್ತಿದ್ದ. ತನ್ನ ತಾಯಿಯ ಪಕ್ಕದಲ್ಲಿ ಆಟವಾಡುತ್ತಾ ಕುಳಿತಿದ್ದಾಗ. ಎಲ್ಲಿಂದಲೋ ಓಡಿಬಂದ ನಾಯಿ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಬಾಲಕನನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ತರಲಾಗಿದೆ. ಪಟ್ಟಣ ಪಂಚಾಯಿತಿ ಸಭಾ ಗೇರಿ ವಾರ್ಡ್ ಸದಸ್ಯ ರಾಜು ನಾಯ್ಕ, ನಾಯಿ ಕಚ್ಚಿ ಗಾಯ ಗೊಂಡ ಬಾಲಕನ ಪಾಲಕನಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ನೆರವು ನೀಡಿದರು. ಯಲ್ಲಾಪುರ ತಾಲ್ಲೂಕು ಸೇರಿದಂತೆ ಗಡಿ ತಾಲೂಕಿನ ಕೆಲವು ಭಾಗದಲ್ಲಿ ಹುಚ್ಚುನಾಯಿಗಳು ಹಾಗೂ ಬಿಡಾಡಿ ನಾಯಿಗಳ ಉಪಟಳ ಹೆಚ್ಚಾಗಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.
ಹುಚ್ಚುನಾಯಿ ಹಾಗೂ ಬೀದಿನಾಯಿಗಳ ಕಡಿತಕ್ಕೆ ಚಿಕ್ಕ ಮಕ್ಕಳು ಬಲಿಯಾಗುತ್ತಿದ್ದಾರೆ. ಅದರಲ್ಲಿಯೂ ಪಾಲಕರು ಅಥವಾ ಮನೆಯ ಹಿರಿಯರು ಮಕ್ಕಳ ಜೊತೆ ಇಲ್ಲದಿದ್ದರೆ ಮಕ್ಕಳನ್ನು ತೀವ್ರವಾಗಿ ಕಚ್ಚಿ ಗಾಯ ನೋವು ಗೊಳಿಸುವ ಉದಾಹರಣೆಗಳು ಬಹಳಷ್ಟಿವೆ. ಗ್ರಾಮ ಪಂಚಾಯತಿಯವರು ಈ ಬಗ್ಗೆ ನಿಗಾವಹಿಸಿ ಹುಚ್ಚುನಾಯಿ ಹಾಗೂ ಉಪಟಳ ನೀಡುವ ಬೀಡಾಡಿ ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿದೆ.
Leave a Comment