ಶಿರಸಿ;
ನಗರದ ಮರಾಠಿ ಕೊಪ್ಪದಲ್ಲಿ ಶುಕ್ರವಾರ ಬೆಳಗ್ಗೆ ಜಾವ 3.50ಕೆ ಹುಂಡೈ ಕ್ರೆಟಾ ಕಾರಿನಲ್ಲಿ ಹೈಟೆಕ್ ಗೋ ಕಳ್ಳತನ ನಡೆದಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಾವಳಿ ಸರಿಯಾಗಿದೆ. ರಸ್ತೆಯ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕೆಲವೇ ನಿಮಿಷಗಳಲ್ಲಿ ಕ್ರೇಟಾ ಕಾರಿನಲ್ಲಿ ತುಂಬಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಕೃತ್ಯ ಕಣ್ಣಾರೆ ಕಂಡ ನಗರಸಭಾ ವಾಟರ್ ಮ್ಯಾನ್ ನ್ನಿಂದ ಪ್ರಕರಣ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದ ಹೊಸ ಮಾರುಕಟ್ಟೆ ಪೊಲೀಸರು ಕೃತ್ಯ ನಡೆದ ಪರಿಸರದ ಸಿಸಿಟಿವಿ ಕ್ಯಾಮರ ಗಳ ದ್ರುಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸಂಪೂರ್ಣ ದೇಹವನ್ನು ಮುಚ್ಚುವ ಬಿಳಿ ಬಣ್ಣದ ಜರ್ಕಿನ್ ದರೆಸಿ ವ್ಯವಸ್ಥಿತವಾದ ತರಬೇತಿಯೊಂದಿಗೆ ಆಗಮಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ..
ಶಿರಸಿಯ ಪೋಲಿಸ್ ವ್ಯವಸ್ಥೆಗೆ ಸವಾಲು ಮೆಸೇಜ್ ಎಸೆದಿರುವಂತೆ ನಿರಂತವಾಗಿ ಗೋಕಳ್ಳತನ ನಡೆಯುತ್ತಿದ್ದು ಪೊಲೀಸರ ರಾತ್ರಿ ಪಹರಿ ಸಂಪೂರ್ಣ ವಿಫಲವಾಗಿದೆಯೇ ಎನ್ನುವಂತ ವಾತಾವರಣ ಸೃಷ್ಟಿಯಾಗಿದೆ. ತಕ್ಷಣ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ ಗೋ ಕಳ್ಳರ ವಿರುದ್ಧ ಪೋಲಿಸರಿಂದ ಕಠಿಣಾತಿಕಠಿಣ ಕ್ರಮವಾಗದ ಹೊರತು ಗೋಕಳ್ಳತನ ತಹಬದಿಗೆ ತರುವುದು ಅಸಾಧ್ಯ ಎನ್ನುವ ಮಾತು ಕೇಳಿಬರುತ್ತಿದೆ .
ಅರೆಬರೆ ಕೊಂಡವಾಡ ನಿರ್ಮಿಸುವ ಮೂಲಕ ಜವಾಬ್ದಾರಿ ಮರೆತ ನಗರಸಭೆ, ಗೋರಕ್ಷಣೆ ಹಿಂದುತ್ವದ ಮಂತ್ರ ಮೊಳಗುವ ಕ್ಷೇತ್ರದಲ್ಲಿಯೇ ಗೋವುಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು, ಹಾಲು ಕೊಡುವಾಗ ಮನೆಯಲ್ಲಿ ಕಟ್ಟಿ ನಂತರ ಬೀದಿಗೆ ಬೀಡುವುದು ಇಂತಹ ವ್ಯವಸ್ಥೆ ಗೋ ಕಳ್ಳರಿಗೆ ವರವಾಗಿ ಪರಿಣಮಿಸಿರುವುದು ಕಂಡುಬರುತ್ತಿದೆ. ಗೋ ಕಳವು ಕುರಿತಂತೆ ರವಿಚಂದ್ರ ಗೌಡ ಎನ್ನುವರು ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
Leave a Comment