ಭಟ್ಕಳ: ಇಲ್ಲಿನ ತಾಲೂಕಾ ಪಂಚಾಯತ ಎದುರಿನ ರಾಷ್ಟ್ರಿಯ ಹೆದ್ದಾರಿಯಲ್ಲಿ ಆ್ಯಕ್ಟಿವಾ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು ಆಕ್ಟೀವಾ ಬೈಕ್ ಸವಾರ ಸ್ಥಳದಲ್ಲಿ ಮೃತ ಪಟ್ಟ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಮೃತ ವ್ಯಕ್ತಿ ಗಂಗಾವಳಿ ಅಬ್ದುಲ್ ಖಾದಿರ್ ಇಶ್ತಿಯಾಕ್ ಹೆಬ್ಳೆಯ ಜಾಮಿಯಾಬಾದ್ ಮದಿನಾ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ .ಬೈಕ್ ಸವಾರ ರಸ್ತೆ ದಾಟುವೆ ವೇಳೆ ಈ ಅಪಘಾತ ಸಂಭವಿಸಿರ ಬಹುದೆಂದು ತಿಳಿದು ಬಂದಿದ್ದು?.ಅಪಘಾತ ರಭಸಕ್ಕೆ ಲಾರಿ ಚಕ್ರ ಆಕ್ಟೀವಾ ಬೈಕ್ ಸವಾರನ ತಲೆಯ ಮೇಲೆ ಹರಿದು ಹೋಗಿರುವುದರಿಂದ ತಲೆ ಭಾಗ ಛಿದ್ರ ಛಿದ್ರವಾಗಿದ್ದು ಗುರುತು ಪತ್ತೆಹಚ್ಚಲಾಗದ ಸ್ಥಿತಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ವೇಳೆ ಆಕ್ಟಿವಾ ಬೈಕ್ ಸವಾರನು ಹೆಲ್ಮೆಟ್ ಧರಿಸಿದ್ದರು ಹೆಲ್ಮೆಟ್ ಪುಡಿ ಪಡಿಯಾಗಿದೆ.
ಸ್ಥಳಕ್ಕೆ ನಗರ ಠಾಣಾ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
Leave a Comment