ಅಪರೂಪದ ವಿದ್ಯ ಮಾನವಾದ ಬೆಂಕಿಯ ಸುಂಟರಗಾಳಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಹಾವಳಿ ನಡೆಸಿರುವ ಘಟನೆ ವರದಿಯಾಗಿದೆ. ಅಮೇರಿಕಾದ ನಾನಾ ಭಾಗಗಳಲ್ಲಿ ಹವಾಮಾನ ವೈಪರಿತ್ಯ ಘಟನೆಗಳು ವರದಿಯಾಗುತ್ತಿರುವ ಬೆನ್ನಲ್ಲೇ ಬೆಂಕಿಯ ಸುಂಟರಗಾಳಿ, ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಾದ್ಯಂತ ತಾಪಮಾನ ಏರಿಕೆ ಕಂಡುಬಂದಿದೆ. ಇನ್ನು ಫ್ಲೋರಿಡಾ ಭಾಗದಲ್ಲಿ ಎಲ್ಲಾ ಚಂಡಮಾರುತದಲ್ಲಿ ಭಾರಿ ಮಳೆಯಾಗುತ್ತಿದೆ. ಅದರ ನಡುವೆ ಬೆಂಕಿ ಸುಂಟರಗಾಳಿಯು ಕಾಣಿಸಿಕೊಂಡಿದೆ.
ಕ್ಯಾಲಿಫೋರ್ನಿಯಾದ ಬೆಂಕಿ ಸುಂಟರಗಾಳಿ ದೃಶ್ಯಾವಳಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿಡಿಯೋದಲ್ಲಿ ಸೆರೆಹಿಡಿದಿದ್ದು ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ ಉಷ್ಣ ಗಾಳಿ ಶೀತ ಮಾರುತದೊಂದಿಗೆ ಸೇರುವ ಈ ಪ್ರಕ್ರಿಯೆಯಲ್ಲಿ ಸುಂಟರಗಾಳಿ ಘಟಿಸುತ್ತದೆ. ಸುಂಟರಗಾಳಿಯ ಹಾದಿಯಲ್ಲಿ ಬೆಂಕಿ ಸಂಪರ್ಕಕ್ಕೆ ಬಂದಾಗ ಸುಂಟರಗಾಳಿ ತನ್ನೊಳಗೆ ಬೆಂಕಿಯನ್ನು ಪ್ರವಹಿಸುತ್ತದೆ.
Leave a Comment