ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋದ ಪ್ರವಾಸಿಗರಿಬ್ಬರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ರವಿವಾರ ಸಂಜೆ ಮುರುಡೇಶ್ವರ ದೇವಸ್ಥಾನದ ಬಲ ಭಾಗದ ಸಮುದ್ರ ತೀರದಲ್ಲಿ ನಡೆದಿದೆ.
ಮೃತ ಯುವಕರನ್ನು ಮಣಿ ಮತ್ತು ನಾಗರಾಜ ಶಿವಮೊಗ್ಗದಮಾಸೂರು ರೋಡ್ ಶಿಕಾರಿಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ಇವರು ತನ್ನ 4 ಜನ ಸ್ನೇಹಿತರೊಂದಿಗೆ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದು ದೇವರ ದರ್ಶನ ಪಡೆದ್ದಾರೆ. ನಂತರ ಸಮುದ್ರಕ್ಕಿಯಲು ಹೋದವೇರೆ ಹವಮಾನ ವೈಪರೀತ್ಯದಿಂದ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಇರುವ ಕಾರಣ ಪ್ರವಾಸಿಗರು ಸಮುದ್ರದಲ್ಲಿ ಇಳಿಯಬಾರದೆಂದು ನಿಷೇಧ ಹೇರಿದ್ದರು.
ಮಂಜುನಾಥ್ ಮಣಿ
ಆದರೆ ಈ 4 ಜನ ಯುವಕರ ತಂಡ ದೇವಸ್ಥಾನದ ಬಲಭಾಗದಲ್ಲಿ ರುವ ಆರ್.ಎನ್.ಎಸ್ ಕಲ್ಯಾಣ ಮಂಟಪದ ಬದಿಯ ಸಮುದ್ರದಲ್ಲಿ ಮೋಜು ಮಸ್ತಿಗೆ ಈಜಲು ತೆರಳಿದ್ದು ಅಲೆಯ ಹೊಡೆತಕ್ಕೆ 4 ಜನ ಯುವಕರು ಕೊಚ್ಚಿಹೋಗಿದ್ದು ಅದರಲ್ಲಿ ಪ್ರವೀಣ ಮತ್ತು ನಾಗರಾಜ್ ಎನ್ನುವ ಇಬ್ಬರು ಯುವಕರು ಹಾಗೋ ಹೀಗೂ ಈಜಿಕೊಂಡು ದಡ ಸೇರಿ ಜೀವ ಉಳಿಸಿಕೊಂಡರೆ ಮಣಿ ಮತ್ತು ಬೇಕರಿ ಮಂಜುನಾಥ ಎನ್ನುವರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಂಜುನಾಥ ಮೃತ ದೇಹ ಅಲೆಯ ಹೊಡೆತಕ್ಕೆ ಸಮುದ್ರದ ದಡಕ್ಕೆ ಬಂದಿದ್ದು ಮಣಿ ಎನ್ನುವ ಯುವಕನ ಮೃತ ದೇಹ ಪೆತ್ತೆಯಾಗಿಲ್ಲ ವಾಗಿದೆ.
Leave a Comment