ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ರವಿವಾರ ಸಂಜೆ ಈಜಲು ಹೋದ ಪ್ರವಾಸಿಗರಿಬ್ಬರು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಓರ್ವನ ಮೃತ ದೇಹ ಸೋಮವಾರ ಬೆಳೆಗ್ಗೆ ಪತ್ತೆಯಾಗಿದೆ.
ಹೌದು ರವಿವಾರ ಸಂಜೆ ಶಿವಮೊಗ್ಗದ ಮಾಸೂರು ರೋಡ್ ಶಿಕಾರಿಪುರದ 4 ಜನ ಯುವಕರ ತಂಡ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಲು ಹೋದ ವೇಳೆ ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದರು.
ಅದರಲ್ಲಿ ಇನ್ನಿಬ್ಬರು ಯುವಕರು ಸಮುದ್ರದಲ್ಲಿ ಈಜಿಕೊಂಡು ದಡ ಸೇರಿ ಪ್ರಾಣ ಉಳಿಸಿಕೊಂಡಿದ್ದರು. ಆದರೆ ಮೃತ ಪಟ್ಟ ಇಬ್ಬರು ಯುವಕರಲ್ಲಿ ಮಂಜುನಾಥ ಎನ್ನುವ ಯುವಕನ ಮೃತ ದೇಹ ನಿನ್ನೆ ಸಂಜೆ ಪತ್ತೆಯಾಗಿದ್ದು. ಮಣಿ ಎನ್ನುವ ಯುವಕನ ಮೃತ ದೇಹ ನಾಪತ್ತೆಯಾಗಿತ್ತು. ಅದು ಇಂದು ಬೆಳಿಗ್ಗೆ ಮುರುಡೇಶ್ವರ ದೇವಸ್ಥಾನದ ಬಲ ಬದಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
Leave a Comment