7 ಮೊಸಳೆ ಮರಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ 28 ವರ್ಷದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಸಕ್ಲೇನ್ ಸಿರಾಜುದ್ದೀನ್ ಥಾಣೆ ನಿವಾಸಿ ಎಂದು ತಿಳಿದು ಬಂದಿದೆ, ಖಚಿತ ಮಾಹಿತಿಯvಮೇಲೆ ದಾಳಿ ಮಾಡಿದ ಪೊಲೀಸರು ಮೊಸಳೆ ಮರಿಗಳನ್ನು ರಕ್ಷಿಸಿದ್ದಾರೆ.
ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಾಗಿದೆ. ಮೊಸಳೆ ಮರಿಗಳ ಮೌಲ್ಯ 2.80ಲಕ್ಷ ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಜುಲೈ 15ರ ತನಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
Leave a Comment