ಮಂಗಳೂರು: ನಗರದ ಉರ್ವ ಠಾಣೆಗೆ ಬಂದ
ಮೂವರು ಅಲ್ಲಿನ ಸಿಬ್ಬಂದಿಯ ಜೊತೆಗೆ ಅನುಚಿತವಾಗಿ
ವರ್ತಿಸಿದ್ದು, ಹಲ್ಲೆಗೆ ಯತ್ನಿಸಿದ್ದಾರೆ. ಈ ಸಂಬಂಧ
ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ
ಪೆÇಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಉರ್ವ ಠಾಣೆ ವ್ಯಾಪ್ತಿಯ ಅಪಾರ್ಟ್‍ಮೆಂಟ್‍ನಲ್ಲಿ
ನಿರ್ವಹಣೆ ಶುಲ್ಕ ಕೊಡುವುದು ಹಾಗೂ ನೀರಿನ ಸಂಪರ್ಕ
ಒದಗಿಸುವ ಕುರಿತು ಗಲಾಟೆ ನಡೆದಿತ್ತು. ಈ ಬಗ್ಗೆ ಮೇ
ತಿಂಗಳಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಬಾಲಕಿಗೆ ಹೊಡೆದ ಬಗ್ಗೆ ಪೆÇೀಕ್ಸೊ ಪ್ರಕರಣ ಹಾಗೂ
ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು.
ನಂತರ ಅಪಾರ್ಟ್‍ಮೆಂಟ್‍ನವರು ರಾಜಿ
ಮಾಡಿಕೊಂಡಿದ್ದು, ನೀರಿನ ಸಂಪರ್ಕ ಒದಗಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆಯುವುದಾಗಿ
ಡಿಸಿಪಿ ಅವರಿಗೆ ತಿಳಿಸಿದ್ದರು. ಅದರಂತೆ ಸಂಬಂಧಿಸಿದ
ಠಾಣಾಧಿಕಾರಿ ಬಳಿ ತೆರಳಿ, ಲಿಖಿತ ಹೇಳಿಕೆ
ದಾಖಲಿಸುವಂತೆ ಸೂಚನೆ ನೀಡಿದ್ದರು.ಹೇಳಿಕೆ
ದಾಖಲಿಸಲು ಬುಧವಾರ ಉರ್ವ ಠಾಣೆಗೆ ನೋವೆಲ್
ಸಿಕ್ವೇರಾ, ಜಾನ್ ಸಿಕ್ವೇರಾ ಹಾಗೂ ಅವರ ಮಗಳು
ಬಂದಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ
ಕಾನ್‍ಸ್ಟೆಬಲ್ ಪೂಜಾ ಹಿರೇಮಠ ಅವರ ಜೊತೆಗೆ
ಅನುಚಿತವಾಗಿ ವರ್ತಿಸಿದ್ದು, ಹಲ್ಲೆಗೆ ಮುಂದಾಗಿದ್ದಾರೆ.
ಅಲ್ಲದೇ ಠಾಣೆಯ ಇನ್‍ಸ್ಪೆಕ್ಟರ್ ಕಾರ್ಯವನ್ನು ವಿಡಿಯೊ
ಚಿತ್ರೀಕರಣ ಮಾಡಲು ಯತ್ನಿಸಿದ್ದಾರೆ. ಇದನ್ನು
ತಡೆಯಲು ಹೋದ ಇನ್ನೊಬ್ಬ ಸಿಬ್ಬಂದಿಯ ಮೇಲೂ
ಹಲ್ಲೆ ನಡೆಸಿದ್ದಾರೆ ಎಂದು ಎನ್. ಶಶಿಕುಮಾರ್
ತಿಳಿಸಿದ್ದಾರೆ.
ಇಬ್ಬರೂ ಸಿಬ್ಬಂದಿಗೆ ವೆನ್ಲಾಕ್‍ನಲ್ಲಿ ಪ್ರಾಥಮಿಕ ಚಿಕಿತ್ಸೆ
ನೀಡಲಾಗಿದೆ. ಮಹಿಳಾ ಸಿಬ್ಬಂದಿಯ ಕಾಲಿಗೆ ಪೆಟ್ಟಾಗಿದ್ದು,
ಎಕ್ಸ್‍ರೇ ಮಾಡಿಸಲು ವೈದ್ಯರು ಸೂಚಿಸಿದ್ದಾರೆ ಎಂದು
ಹೇಳಿದ್ದಾರೆ.
Leave a Comment