ಭಟ್ಕಳ: ತಾಲೂಕಿನ ಅಂಚೆ ಕಚೇರಿ ಕಾಂಪೌಂಡ ಒಳಗಡೆ ನಿಲ್ಲಿಸಿಟ್ಟ ಬೈಕ್ನಲ್ಲಿದ್ದ ಹೆಲ್ಮೆಟನ್ನು ಅಪರಿಚಿತ ಯುವಕನೋರ್ವ ಕೆ.ಟಿ.ಎಂ ಬೈಕ್ ನಲ್ಲಿ ಬಂದು ಕದ್ದೊಯ್ಯದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಜೂನ್ 24 ರಂದು ಸ್ಪೀಡ್ ಪೋಸ್ಟ್ ಮಾಡಲು ವ್ಯಕ್ತಿಯೋರ್ವರು ತಮ್ಮ ಬೈಕನ್ನು ಅಂಚೆ ಕಚೇರಿಯ ಕಾಂಪೌಂಡ ಒಳಗೆ ನಿಲ್ಲಿಸಿ ಹೆಲ್ಮೆಟ್ ಕೂಡ ಅದಲ್ಲೇ ಇಟ್ಟು ಸ್ಪೀಡ್ ಪೋಸ್ಟ್ ಮಾಡಿ ಬರುವುದರೊಳಗಾಗಿ ಬೈಕ್ನಲ್ಲಿದ್ದ ಹೆಲ್ಮೆಟ್ ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ನಂತರ ವ್ಯಕ್ತಿ ಅಂಚೆ ಕಚೇರಿಯಲ್ಲಿರುವ ಸಿ ಸಿ.ಟಿ.ವಿ ಮತ್ತು ಅಲ್ಲೆ ಸಮೀಪವಿರುವ ಖಾಸಗಿ ಆಸ್ಪತ್ರೆಯ ಸಿ.ಸಿ ಟಿ.ವಿ ಪರಿಶೀಲಿಸಿದಾಗ ಯುವಕನೋರ್ವ ಟಿಪ್-ಟಾಪ್ ಬಟ್ಟೆ ಧರಿಸಿ ದುಬಾರಿ ಕೆ.ಟಿ.ಎಂ ಬೈಕ್ ನಲ್ಲಿ ಬಂದು ಅಂಚೆ ಕಚೇರಿ ಕಾಂಪೌಂಡ ಒಳಗಡೆ ನಿಲ್ಲಿಸಿಟ್ಟ ಬೈಕ್ನಲ್ಲಿ ಹೆಲ್ಮೆಟ್ ಧರಿಸಿಪರಾರಿಯಾಗಿದ್ದಾನೆ. ಈತ ಕಳ್ಳತನ ಮಾಡಿ ಪರಾರಿಯಾಗುವ ದ್ರಶ್ಯ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
Leave a Comment