ಕಾರವಾರ: ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ
ಯೋಜನೆಯ ಕರಡು ಅಧಿಸೂಚನೆ ಮತ್ತು ನಕ್ಷೆಯ ಕುರಿತು ಸಲಹೆ,
ಆಕ್ಷೇಪಣೆ ಮತ್ತು ಅನಿಸಿಕೆಗಳಿದ್ದಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯ
ಸಾರ್ವಜನಿಕರು 30 ದಿನದೊಳಗಾಗಿ ಲಿಖಿತವಾಗಿ ಪೂರಕದಾಖಲೆಗಳೊಂದಿಗೆ ನಗರಸಭೆಗೆ ಸಲ್ಲಿಸಬಹುದು.
ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ- 2019 ಅನುಸಾರ
ಕರ್ನಾಟಕ ರಾಜ್ಯ ಕಡಲತೀರ ವಲಯ ನಿರ್ವಹಣಾ ಯೋಜನೆಯ
ಕರಡು ಅಧಿಸೂಚನೆ ಮತ್ತು ನಕ್ಷೆ ಹೊರಡಿಸಲಾಗಿದ್ದು, ಸದರಿ ಪ್ರತಿ
ನಗರಸಭೆಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಇಡಲಾಗಿದೆ.
ಈ ಬಗ್ಗೆ
ಏನಾದರೂ ಸಲಹೆ, ಆಕ್ಷೇಪಣೆ ಮತ್ತು ಅನಿಸಿಕೆಗಳಿದ್ದಲ್ಲಿ ಲಿಖಿತವಾಗಿ
ಪೂರಕ ದಾಖಲೆಗಳೊಂದಿಗೆ 30 ದಿನದ ಒಳಗಾಗಿ ಸಲ್ಲಿಸಬಹುದು.
ಅವಧಿ ಮೀರಿ ಬಂದ ಯಾವುದೇ ಆಕ್ಷೇಪಣೆ/ ಸಲಹೆ/ ಅನಿಸಿಕೆಗಳನ್ನು
ಪರಿಗಣಿಸಲಾಗುವುದಿಲ್ಲ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ್
ಪ್ರಕಟಣೆಯಲ್ಲಿತಿಳಿಸಿದ್ದಾರೆ.
Leave a Comment