ಬೆಂಗಳೂರು;
ಓಲಾದ ವಿದ್ಯುಚ್ಚಾಲಿತ ಸ್ಕೂಟರ್ ಬುಕಿಂಗ್ ಆರಂಭವಾದ 24 ಗಂಟೆಗಳೊಳಗೆ 1 ಲಕ್ಷಕ್ಕೂ ಅಧಿಕ ಬುಕಿಂಗ್ ಆಗಿದೆ ಎಂದು ಓಲಾ ಕಂಪನಿಯು ಶನಿವಾರ ತಿಳಿಸಿದೆ .
ಈ ಸ್ಕೂಟರ ಮುಂಗಡ ಕಾಯ್ದಿರಿಸುವಿಕೆ ಯು ಜುಲೈ 15ರಂದು ಆರಂಭವಾಗಿದ್ದು ಮರು ಪಾವತಿಸಬಹುದಾ ದ 499 ಠೇವಣಿ ಇರಿಸಿ ಸ್ಕೂಟರ್ ಕಾಯ್ದಿರಿಸಬಹುದಾಗಿದೆ.

ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆತಿರುವುದು ನನಗೆ ಸಂತೋಷ ತಂದಿದೆ. ಈ ಅಭೂತಪೂರ್ವ ಬೇಡಿಕೆಯು ಗ್ರಾಹಕರು ಎಲೆಕ್ಟ್ರಿಕಲ್ ವಾಹನಗಳಂತೆ ಮುಖ ಮಾಡುತ್ತಿರುವುದು ಸ್ಪಷ್ಟ ಸೂಚನೆಯಾಗಿದೆ ಎಂದು ಓಲಾ ಅಧ್ಯಕ್ಷ ಭವಿಷ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment