
ಯಲ್ಲಾಪುರ :ತಾಲೂಕಿನ ವಿಶ್ವದರ್ಶನ ಎಜ್ಯುಕೇಶನ್ ಸೊಸೈಟಿಯು ನೂತನವಾಗಿ ವಿಶ್ವದರ್ಶನ ಕರಿಯರ್ ಅಕಾಡೆಮಿಯನ್ನು (IAS/IPS/IFS/KAS/IBPS BANKING /SSC& TET/CTET/PDO/PSI/FDA/SDA/KVPY ಪರೀಕ್ಷಾ ತರಬೇತಿ ಕೇಂದ್ರ ವನ್ನುಇಂದು (ಜು 19)ಸಂಜೆ 5 ಗಂಟೆಗೆ ಶುಭಾ ರಂಭ ವಾಗಲಿದೆ ಉದ್ಘಾಟಕರಾಗಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿ ಸೋಂದಾ ಇವರ ದಿವ್ಯ ಸಾನಿಧ್ಯದಲ್ಲಿ ಆರಂಭಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರ ಕಾರ್ಯದರ್ಶಿ ಹಾಗೂ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು, ಸುರೇಶ್ ಯಳ್ಳೂರು ವೃತ ಆರಕ್ಷಕ ನಿರೀಕ್ಷಕರು ಯಲ್ಲಾಪುರ , ಮಂಜುನಾಥ ಕೆ ಹೆಚ್ ಜ್ಞಾನ ಭಾರತಿ ಬೆಂಗಳೂರು IAS/KAS ಸ್ಟಡಿ ಸೆಂಟರ್ ಬೆಂಗಳೂರು, ಜೀತೆಂದ್ರ ನಾಯಕ ಟ್ರಸ್ಟಿ ಸಮುತ್ಕರ್ಷ IAS/KAS ಸ್ಟಡಿ ಸೆಂಟರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ ಲಿದ್ದಾರೆ ಹಾಗೂಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ, ಉಪಾಧ್ಯಕ್ಷರು, ಮತ್ತು ಸಂಸ್ಥೆಯ ಆಡಳಿತ ಮಂಡಳಿ ಯ ಅಧ್ಯಕ್ಷರಾದ ಹರಿಪ್ರಕಾಶ್ ಕೋಣೆಮನೆ ಹಾಗೂ ನಿರ್ದೇಶಕರಾದ ನರಸಿಂಹ ಭಟ್ ಕೋಣೆಮನೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment