• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು

July 20, 2021 by bkl news Leave a Comment

ಭಟ್ಕಳ: ಇಸ್ಲಾಮ್ ಧರ್ಮೀಯರ ಪವಿತ್ರ  ಬಕ್ರೀದ್ ಹಬ್ಬ ನಾಳೆಯಿಂದ ಆರಂಭವಾಗಿ 3 ದಿನಗಳ ಕಾಲ ನಡೆಯುತ್ತಿದು. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ಹಿನ್ನೆಲೆಯಲ್ಲಿ ಈ ವರ್ಷವೂ ಹೆಚ್ಚಿನ ಜನರು ಕುರಿಗಳ ಬಲಿದಾನಕ್ಕೆ ಮುಂದಾಗಿದ್ದಾರೆ. 


ಉತ್ತರಕನ್ನಡ ಜಿಲ್ಲೆಯಲ್ಲಿ ಕುರಿಗಳ ಸಾಕಾಣಿಕೆ ಹಾಗೂ ಮಾರಾಟಕ್ಕೆ ಭಟ್ಕಳದ ಮೋಟಿಯಾ ಗೋಟ್ ಫಾರ್ಮಗೆ ದೊಡ್ಡ ಹೆಸರಿದೆ. ವರ್ಷದ 12 ತಿಂಗಳೂ ಧರ್ಮ ಭೇದವಿಲ್ಲದೇ ಕುರಿಗಳನ್ನು ಖರೀದಿಸಲು ಜನರು ಬರುತ್ತಾರೆ. ಮುಸ್ಲೀಮರ ಬಕ್ರೀದ್ ಮಾತ್ರವಲ್ಲ, ತಾಲೂಕಿನ ಸೋಡಿಗದ್ದೆ, ನೇತ್ರಾಣಿ ಪೂಜೆ, ಉತ್ಸವದ ಸಂದರ್ಭದಲ್ಲಿಯೂ ಇಲ್ಲಿ ಹೆಚ್ಚಿನ ಕುರಿಗಳು ಮಾರಾಟವಾಗುತ್ತವೆ. ಈ ಬಾರಿ ಜು.21ರಂದು ಬಕ್ರೀದ್ ಆಚರಿಸಲಾಗುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಹೈದರಾಬಾದ್‍ಗಳಿಂದ ಸಾವಿರಾರು ಕುರಿಗಳನ್ನು ಭಟ್ಕಳಕ್ಕೆ ಕರೆ ತರಲಾಗಿದೆ.

Screenshot 20210720 200122 WhatsApp

ಕುರಿ ಮಾರಾಟಕ್ಕಾಗಿಯೇ ಇಲ್ಲಿನ ಟಿಎಫ್‍ಸಿಹೊಟೆಲ್ ಪಕ್ಕದಲ್ಲಿ ಪ್ರತ್ಯೇಕ ಮಾರಾಟ ಕೇಂದ್ರವನ್ನು ತೆರೆಯಲಾಗಿದೆ. ಜಮುನಾ ಪಾರಿ, ಶಿರೋಯಿ, ಕೋಟಾ, ಸ್ಥಳೀಯ ಟಗರು ಜಾತಿಯ ಕುರಿಗಳು ಮಾರಾಟ ಕೇಂದ್ರದಲ್ಲಿ ಸದ್ದು ಮಾಡುತ್ತಿವೆ. ವಿಶೇಷ ಎಂದರೆ ಈ ಬಾರಿ ಮೋಟಿಯಾ ಗೋಟ್ ಫಾರ್ಮ ಮಾತ್ರವಲ್ಲದೇ ಭಟ್ಕಳದಲ್ಲಿ ಪಟೇಲ್ ಗೋಟ್ ಫಾರ್ಮ, ಸುಲ್ತಾನ್ ಗೋಟ್ ಫಾರ್ಮ, ಫ್ರೆಂಡ್ಸ್ ಗೋಟ್ ಫಾರ್ಮ, ಇನಾಮ್ ಗೋಟ್ ಫಾರ್ಮ ಹೆಸರಿನಲ್ಲಿ ಹೊಸದಾಗಿ ವಿಭಿನ್ನ ಕುರಿ ಮಾರಾಟ ಕೇಂದ್ರಗಳು ತಲೆ ಎತ್ತಿ ನಿಂತಿವೆ. 


5000ಕ್ಕೂ ಹೆಚ್ಚು ಮಾರಾಟ ನಿರೀಕ್ಷೆ:

ಈ ಬಾರಿ ಜಾನುವಾರು ಸಾಗಾಟಕ್ಕೆ ಕಟ್ಟುನಿಟ್ಟಾಗಿ ಪೊಲೀಸರು ತಡೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ 5000ಕ್ಕೂ ಹೆಚ್ಚು ಕುರಿಗಳು ಮಾರಾಟವಾಗುವ ನಿರೀಕ್ಷೆಯನ್ನು ಮೋಟಿಯಾ ಗೋಟ್ ಫಾರ್ಮ ಮಾಲಕ ಅರ್ಸಲಾನ್ ಮೋಟಿಯಾ ಇಟ್ಟುಕೊಂಡಿದ್ದಾರೆ. ಭಟ್ಕಳದ ಸುತ್ತಮುತ್ತಲಿನ ತಾಲೂಕುಗಳ ಜನರೂ ಕುರಿಗಳಿಗಾಗಿ ಭಟ್ಕಳಕ್ಕೆ ಲಗ್ಗೆ ಇಟ್ಟಿದ್ದಾರೆ. ಸಾಧಾರಣವಾಗಿ ರು.15000-20000 ಬೆಲೆಯ ಕುರಿಗಳನ್ನೇ ಇಲ್ಲಿನ ಮಧ್ಯಮ ವರ್ಗದ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ.

ಅಲ್ಲದೇ ಜಾನುವಾರು ಸಾಗಾಟ, ಬಲಿದಾನ ಎರಡೂ ಸ್ಥಳೀಯವಾಗಿ ಆಗಾಗ್ಗೆ ಗೊಂದಲ, ಸಮಸ್ಯೆಯನ್ನು ಉಂಟು ಮಾಡುತ್ತಿರುವುದರಿಂದ ಕುರಿಗಳಿಗೆ ಈ ಬಾರಿ ಖಂಡಿತವಾಗಿ ಬೇಡಿಕೆ ಹೆಚ್ಚಾಗಲಿದೆ. ಈ ಬಾರಿಯ ವಿಶೇಷ ಏನೆಂದರೆ ಇಲ್ಲಿಯೇ ಕುರಿಗಳ ಬಲಿದಾನಕ್ಕೂ ವ್ಯವಸ್ಥೆ ಕಲ್ಪಿಸಿದ್ದೇವೆ. ಬಲಿದಾನಕ್ಕೆ ಸೂಕ್ತ ಸ್ಥಳಾವಕಾಶ ಇಲ್ಲದೇ ಇದ್ದವರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಬೇಡಿಕೆ ಮತ್ತಷ್ಟು ಹೆಚ್ಚಾದರೆ ಪರರಾಜ್ಯಗಳಿಂದ ಇನ್ನಷ್ಟು ಕುರಿಗಳನ್ನು ತರಿಸಿಕೊಳ್ಳುತ್ತೇವೆ ಎನ್ನುತ್ತಾರೆ ಅರ್ಸಲಾನ್.

ಭಟ್ಕಳದಲ್ಲಿ ಬೀಡು ಬಿಟ್ಟ ಕುರಿಗಾಹಿಗಳು: 
ಬಕ್ರೀದ್‍ಗಾಗಿ ಬಂದ ಕುರಿಗಳ ಪಾಲನೆಗಾಗಿ ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ 10ಕ್ಕೂ ಹೆಚ್ಚು ಕುರಿಗಾಹಿಗಳನ್ನು ಕರೆಯಿಸಿಕೊಳ್ಳಲಾಗಿದೆ. ಕುರಿಗಳು ಮಾರಾಟವಾಗುವವರೆಗೂ ಕುರಿಗಳಿಗೆ ಇವರೇ ಆಹಾರ, ನೀರು ಒದಗಿಸುತ್ತಿದ್ದಾರೆ. ಬಕ್ರೀದ್ ಬಂತೆಂದರೆ ಇವರಿಗೂ ಹಬ್ಬ! ಊರಿನಲ್ಲಿಯೂ ಕುರಿ ಸಾಕಾಣಿಕೆಯೇ ನಮ್ಮ ಕಸುಬು. ಪ್ರತಿ ವರ್ಷ ಬಕ್ರೀದ್‍ಗಾಗಿ ಭಟ್ಕಳಕ್ಕೆ ಬಂದು 15 -20 ದಿನ ಇಲ್ಲಿಯೇ ನೆಲೆಸುತ್ತೇವೆ, ಕೈ ತುಂಬ ಸಂಬಳವನ್ನು ನೀಡಲಾಗುತ್ತದೆ. ಬಕ್ರೀದ್ ಮುಗಿಯುತ್ತಿದ್ದಂತೆಯೇ ಊರಿಗೆ ಹೊರಟು ಬಿಡುತ್ತೇವೆ ಎನ್ನುತ್ತಾರೆ ಕೊಪ್ಪಳದ ಉಚ್ಚರೆಪ್ಪ.

ಈ ಕುರಿಗಳ ಪಾಲನೆಯ ಬಗ್ಗೆ ಕೊಪ್ಪಳ, ಬಾಗಲಕೋಟೆ ಭಾಗದ ಕುರಿಗಾಹಿಗಳಿಗೆ ಹೆಚ್ಚಿನ ಮಾಹಿತಿ ಇರುತ್ತದೆ. ಈ ಕೆಲಸವನ್ನು ಇಲ್ಲಿನ ಕಾರ್ಮಿಕರಿಗೆ ವಹಿಸಿದರೆ ನಿರ್ವಹಣೆ ಕಷ್ಟಸಾಧ್ಯ. ಅಲ್ಲದೇ ಪ್ರತಿ ಕ್ಷಣವೂ ಇಲ್ಲಿಯೇ ನಿಂತು ಮಾರ್ಗದರ್ಶನ ನೀಡುವುದಕ್ಕೂ ನಮಗೆ ಆಗುವುದಿಲ್ಲ, ಅದಕ್ಕಾಗಿಯೇ ಕುರಿಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವ ಕುರಿಗಾಹಿಗಳು, ಮಾತ್ರವಲ್ಲ ಕುರಿಗಳ ಆರೋಗ್ಯವನ್ನು ನೋಡಿಕೊಳ್ಳಲು ವೈದ್ಯರನ್ನೂ ಕರೆಯಿಸಿಕೊಂಡಿದ್ದೇವೆ ಎನ್ನುತ್ತಾರೆ ಕುರಿ ಮಾರಾಟ ಕೇಂದ್ರದ ಮಾಲಕ ಅರ್ಸಲಾನ್. ಒಟ್ಟಿನಲ್ಲಿ ಇನ್ನೂ4-5 ದಿನ ಭಟ್ಕಳದಲ್ಲಿ ಬಕ್ರೀದ್ ಕುರಿಗಳದ್ದೇ ಕಾರುಬಾರು ಎನ್ನಬಹುದೇನೋ

ಆತ್ಮಹತ್ಯೆಗೆ ವಿದ್ಯಾರ್ಥಿನಿ ಯತ್ನ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Bhatkal News, Canara News Tagged With: ಉತ್ತರಕನ್ನಡ ಜಿಲ್ಲೆಯಲ್ಲಿ ಕುರಿಗಳ ಸಾಕಾಣಿಕೆ, ಉತ್ಸವದ ಸಂದರ್ಭ, ಕುರಿಗಳ ಪಾಲನೆಗಾಗಿ ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ, ನೇತ್ರಾಣಿ ಪೂಜೆ, ಬಕ್ರೀದ್ ಬಂತೆಂದರೆ ಇವರಿಗೂ ಹಬ್ಬ, ಮಾರಾಟಕ್ಕೆ ಭಟ್ಕಳದ ಮೋಟಿಯಾ ಗೋಟ್ ಫಾರ್ಮ, ಸೋಡಿಗದ್ದೆ

Explore More:

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,358 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

 

Loading Comments...