ನವದೆಹಲಿ (ಪಿಟಿಐ)
, ಆಧಾರ್ ಕಾರ್ಡಿನಲ್ಲಿ ಮೊಬೈಲ್ ಸಂಖ್ಯೆ ದೂರವಾಣಿ ಸಂಖ್ಯೆ ತಪ್ಪಾಗಿದ್ದರೆ ಅದನ್ನು ಪೋಸ್ಟ್ ಮ್ಯಾನ್ ಸಹಾಯದಿಂದ ಮನೆ ಬಾಗಿಲಿನಲ್ಲೆ ಸರಿಪಡಿಸುವ ಅವಕಾಶ ಲಭ್ಯವಾಗಲಿದೆ.
ಆಧಾರ್ ಕಾರ್ಡ್ ಹೊಂದಿರುವವರ ಮೊಬೈಲ್ ದೂರವಾಣಿ ಸಂಖ್ಯೆ ಅಪ್ಡೇಟ್ ಮಾಡಲು ಭಾರತೀಯ ಅಂಚೆ ಪೇಮೆಂಟ್ಸ್ ಬ್ಯಾಂಕ್ ( ಐಪಿಪಿಬಿ) ಮತ್ತು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿವೆ.

ಐಪಿಪಿಬಿ ಯ 650 ಶಾಖೆಗಳು 1.46 ಲಕ್ಷ ಪೋಸ್ಟ್ ಮ್ಯಾನ್ ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ (ಜಿ ಡಿಎಸ್) ಮೂಲಕ ಈ ಸೇವೆ ಪಡೆದುಕೊಳ್ಳಬಹುದು.
ಎಲ್ಲಾ ಕಡೆಗಳಲ್ಲಿಯೂ ಇರುವ ಅಂಚೆ ಕಚೇರಿಗಳು ಪೋಸ್ಟ್ ಮ್ಯಾನ್ ಮತ್ತು ಜೆಡಿಎಸ್ ನೆರವಿನಿಂದ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಿಕೊಳ್ಳುವ ಸೇವೆಯು ಡಿಜಿಟಲ್ ಕಂದಕವನ್ನು ಮುಚ್ಚುವ ಐಪಿಪಿಬಿಯ ಉದ್ದೇಶವನ್ನು ಈಡೇರಿಸುವಂತಿದೆ ಎಂದು ಐಟಿಬಿಪಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ ವೆಂಕಟ್ರಾಮು ಹೇಳಿದ್ದಾರೆ.
Leave a Comment