ಕಾರವಾರ : ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪಲಿತಾಂಶ ಮಂಗಳವಾರ ಪ್ರಕಟವಾಗಿದ್ದು ಜಿಲ್ಲೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳೆಲ್ಲ ತೇರ್ಗಡೆಯಾಗುವ ಮೂಲಕ ಶೇ.100ರಷ್ಟ ಫಲಿತಾಂಶ ಬಂದಿದೆ.
ಈ ಬಾರಿ ಕೋವಿಡ್ ಸೋಂಕಿನ ಕಾರಣದಿಂದ ಪರೀಕ್ಷೆ ನಡೆಸಿರಲಿಲ್ಲ ಪರೀಕ್ಷೆ ಇಲ್ಲದಿದ್ದರೂ ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಗಳಿಸಿದ ಅಂಕಗಳ ಸರಾಸರಿ ಅಂಕ ಪರಿಣಿಸಿ ಫಲಿತಾಂಶ ಪ್ರಕಟಿಸಲಾಗಿದೆ.
ಈ ಬಾರಿ ಜಿಲ್ಲೆಯಿಂದ ಒಟ್ಟು 14,465 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಣಿ ಮಾಡಿಕೊಂಡಿದ್ದು, ಇದರಲ್ಲಿ ಎಲ್ಲ 14,465 ವಿದ್ಯಾರ್ಥಿಗಳು ತೇರ್ಗಡೆಯಾಗಿದಾರೆ. ಕಲಾ ವಿಭಾಗದ 3838 ವಿದ್ಯಾರ್ಥಿ, ವಾಣಿಜ್ಯ ವಿಭಾಗದಲ್ಲಿ 6626 ವಿದ್ಯಾರ್ಥಿಗಳು ವಿಜ್ಣಾನ ವಿಭಾಗದಲ್ಲಿ 400 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದು,
ಈ ಎಲ್ಲ ವಿಧ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಇದರಲ್ಲಿ ನಗರ ಪ್ರದೇಶದಿಂದ 11,003 ಹಾಗೂ ಗ್ರಾಮೀಣ ಪ್ರದೇಶಗಳಿಂದ 3642 ವಿದ್ಯಾರ್ಥಿಗಳಿದ್ದರು ಜಿಲ್ಲೆಯಲ್ಲಿ ಒಟ್ಟು 6545 ಬಾಲಕರು ಹಾಗೂ 7920 ಬಾಲಕಿಯರು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಿದ್ದರು. 998 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದರು. ಇಂಗ್ಷೀಷ ಮಾಧ್ಯಮದಲ್ಲಿ 7791 ಹಾಗೂ ಕನ್ನಡ ಮಾಧ್ಯಮದಲ್ಲಿ 6674 ವಿಧ್ಯಾರ್ಥಿಗಳಿದ್ದರು.
Leave a Comment