ಹೊನ್ನಾವರ : ತಾಲೂಕಿನಾದ್ಯಂತ ಆರ್ಭಟಿಸುವ ಮಳೆಗೆ ಜನಜೀವನ ಸ್ತಭ್ದವಾಗಿದೆ. ಕಳೆದ ಎಂಟು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ ಕಳೆದ ಎರಡು ದಿನದಿಂದ ತಾಲೂಕಿನ ಹಲವಾರು ಕಡೆ ಅನೇಕ ಮನೆಗಳಿಗೆ ಹಾನಿ ಸಂಭವಿಸಿದೆ.
ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಶಂಕ್ರುಕೇರಿಯಲ್ಲಿ ಗಣಪಿ ಕೃಷ್ಣ ಗೌಡ ಇವರ ಮನೆಯ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿ ಹಾನಿ ಸಂಭವಿಸಿದೆ. ಇದೇ ಗ್ರಾಮದ ವಿಜಯ ರಮಾಕಾಂತ ಹಳದೀಪುರ ಒವರ ಮನೆಯ ಗೋಡೆ ಕುಸಿದು ಬಿದ್ದಿದೆ.


ಸಾಲ್ಕೋಡ ಗ್ರಾಮದ ಕಾನಕ್ಕಿಯ ನಾರಾಯಣ ಹರಿಯಾ ಮರಾಠಿ ಇವರ ಮನೆಯ ಮೇಲ್ಚಾವಣೆ ಹಾನಿಯಾಗಿದೆ. ಮಾಗೋಡ ಗ್ರಾಮದ ಕುಚ್ಚೋಡಿಯ ಇಸ್ಮಾಯಿಲ್ ಖಾನ್ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿ ಸಂಭವಿಸಿದೆ.
ಕಡತೋಕ ಗ್ರಾಮದ ಹೆಬ್ಲೆಕೊಪ್ಪ ಕುಪ್ಪು ರಾಮ ಮುಕ್ರಿ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ. ಹಾನಿ ಸಂಭವಿಸಿದ ಮನೆಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ ಎಂದು ತಹಶೀಲ್ದಾರ ವಿವೇಕ ಶೇಣ್ವಿ ಮಾಹಿತಿ ನೀಡಿದ್ದಾರೆ.
Leave a Comment