ಹೊನ್ನಾವರ: ತಾಲೂಕಿನ ಚಿತ್ತಾರ ಗ್ರಾಮದಲ್ಲಿ ಗಾಳಿ ಮಳೆಗೆ ಬೃಹದಾಕಾರದ ಮರ ಬಿದ್ದು ಸಂಚಾರ ಸಮಸ್ಯೆ ಆಗಿತ್ತು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಕೊನೆಯ ಪರೀಕ್ಷೆಯ ಹಿನ್ನಲೆಯಲ್ಲಿ ೩೩ ವಿದ್ಯಾರ್ಥಿಗಳು ಇದೇ ಮಾರ್ಗದಿಂದ ಮಂಕಿ ಪರೀಕ್ಷಾ ಕೇಂದ್ರಕ್ಕೆ ತೆರಳಬೇಕಿತ್ತು.
ವಿದ್ಯುತ್ ಹಾಗೂ ನೆಟವರ್ಕ ಸಮಸ್ಯೆಯಿಂದ ರಸ್ತೆ ಸಂಚಾರ ಬಂದ್ ಆಗಿರುವ ಮಾಹಿತಿ ತಲುಪಿಸಲು ಸಾಧ್ಯವಾಗಲಿಲ್ಲ. ವಿದ್ಯಾರ್ಥಿಗಳ ಭವಿಷ್ಯ ಅರಿತಿದ್ದ ಗ್ರಾಮದ ಪ್ರಜ್ಞಾವಂತ ಯುವಕರು ವಿದ್ಯಾರ್ಥಿಗಳ ಸಹಾಯಕ್ಕೆ ಬಂದು ಬೈಕ್ ಮತ್ತು ಕಾರುಗಳಲ್ಲಿ ಬಸ್ ಹಾಗೂ ಬಸ್ ಬರುವುದನ್ನು ಕಾಯುತ್ತ ನಿಂತಿದ್ದ ಪರೀಕ್ಷಾ ವಿದ್ಯಾರ್ಥಿಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಹದಿನಾಲ್ಕು ಕಿಲೋಮೀಟರ್ ದೂರದ ಅಡಿಕೆಕುಳಿ, ಹಾಲಳ್ಳಿ, ಸಂಪೊಳ್ಳಿ, ಹಡಿಕಲ್ ಮುಂಡಾರ ಭಾಗದಿಂದ ಮಂಕಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಯುವಕರ ಕಾರ್ಯಕ್ಕೆ ತಹಶೀಲ್ದಾರ ವಿವೇಕ ಶೇಣ್ವಿ, ಕ್ಷೇತ್ರ ಶಿಕ್ಷಣಾಧಿಕಾರಿ ಸವಿತಾ ನಾಯ್ಕ ಅಭಿನಂದಿಸಿದ್ದಾರೆ.
Leave a Comment