ನವದೆಹಲಿ : (ಪಿಟಿಐ) : ಟಾಟಾ ಮೋಟರ್ಸ ಕಂಪನಿಯ ಮುಂದಿನ ವಾರದಿಂದ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲು ಮುಂದಾಗಿದೆ. ಉಕ್ಕು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನು
ಸರಿ ಹೊಂದಿಸಲು ಬೆಲೆ ಏರಿಕೆಗೆ ಮುಂದಾಗಿರುವುದಾಗಿ ಕಂಪನಿ ಹೇಳಿದೆ ಕಂಪನಿಯು ಟಿಯಾಗೊ, ನೆಕ್ಸಾನ್. ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.
ಸರಕುಗಳ ಬೆಲೆ ಏರಿಕೆಯಿಂದ ಒಂದು ವರ್ಷದಲ್ಲಿ ನಮ್ಮ ವರಮಾನದ ಮೇಲೆ ಆಗಿರುವ ಪರಿಣಾಮವು ಶೇಕಡ 8ರಿಂದ ಶೇ8.5ರಷ್ಟು ಎಂದು ಕಂಪನಿಯ ಪ್ರಯಾಣಿಕ ವಾಹನಗಳ ವಹಿವಾಟಿನ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
ಕಂಪನಿಯ ಇಲ್ಲಿಯವರೆಗೆ ತಯಾರಿಕಾ ವಿಚ್ಚದಲ್ಲಿ ಆಗಿರುವ ಹೆಚ್ಚಳದ ಒಂದು ಸಣ್ಣ ಭಾಗವನ್ನು ಮಾತ್ರ ಗ್ರಾಹಕರಿಗೆ ರವಾನಿಸಿದೆ. ಪ್ರತಿ ಮಾದರಿಯ ವಾಹನಗಳ ಬೆಲೆ ಎಷ್ಟು ಏರಿಕೆ ಆಗಬಹುದು ಎನ್ನುವ ಕುರಿತು ಕಂಪನಿಯ ಲೆಕ್ಕಹಾಕುತ್ತಿದೆ ಎಂದಿದ್ದಾರೆ.
Leave a Comment