ಬೀದರ :
ಜಮೀನು ಮ್ಯುಟೇಷನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ೧೫ ಲಕ್ಷ ಲಂಚ ಪಡೆಯುತ್ತಿದ್ದ ಬೀದರ್‌ನ ಗ್ರೇಡ್-೧ ತಹಶೀಲ್ದಾರ್ ಗಂಗಾದೇವಿ ಬುಧುವಾರ ಎಸಿಬಿ ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ವಿದ್ಯಾನಗರ ಕಾಲೋನಿಯ ಹಾರ್ಡವೇರ್ ಅಂಗಡಿ ಮಾಲೀಕ ಲೀಲಾಧರ ಪಟೇಲ್, ನಗರದ ಚಿದ್ರಿಯ ಸರ್ವೆ ನಂ.೧೫/೧ಎ೭ರಲ್ಲಿನ ೨ ಎಕರೆ ೨೫ ಗುಂಟೆ ಜಾಗವನ್ನು ಶಿರೋಮಣಿ ನಿಂಗಪ್ಪ ಅವರಿಂದ ಖರೀದಿಸಿದ್ದರು.
ಮ್ಯುಟೇಷನ್‌ಗಾಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿಸಲ್ಲಿಸಿದ್ದರು.

ಕೇಸ್ ವರ್ಕರ್ ಓಂಕಾರ ಅವರನ್ನು ವಿಜಾರಿಸಿದಾಗ ನೋಂದಣಿ ಕ್ಲಿಷ್ಟಕರವಾಗಿರುವ ಕಾರಣ ತಹಶೀಲ್ದಾರ್ ಅವರನ್ನು ಬೇಟಿ ಮಾಡುವಂತೆ ಹಾಗೂ ಅದಕ್ಕಾಗಿ ೨೫ ಲಕ್ಷ ಕೋಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ನನ್ನ ಬಳಿ ೧೫ ಲಕ್ಷ ಮಾತ್ರ ಇವೆ ಎಂದು ಹೇಳಿದ್ದು ಕನಿಷ್ಠ ೨೦ ಲಕ್ಷ ಕೊಡುವಂತೆ ಒತ್ತಡ ಹೇರಿ ಕೈಚೀಲದಲ್ಲಿ ಮನೆಗೆ ತಂದುಕೊAಡುವAತೆ ಸೂಚಿಸಿದ್ದರು ಎಂದು ಲೀಲಾಧರ ಎಸಿಬಿಗೆ ದೂರು ಸಲ್ಲಿಸಿದ್ದರು.
Leave a Comment