ನವದೆಹಲಿ (ಪಿಟಿಐ) ಎರ್ ಟೆಲ್ ಕಂಪನಿಯು ತನ್ನ ಆರಂಭಿಕ ಹಂತದ ಪ್ರೀಪೇಯ್ಡ್ ಯೋಜನೆಯ ಬೆಲೆಯನ್ನು ಶೇಕಡ 60 ರಷ್ಟು ಹೆಚ್ಚಿಸಿದೆ. ಇದು ಗುರುವಾರದಿಂದ ಜಾರಿಗೆ ಬರಲಿದೆ.
49 ರಿಂದ ಆರಂಭ ಆಗುತ್ತಿದ್ದ ರೀಚಾರ್ಜ್ ಯೋಜನೆ ಬದಲಾಗಿ
79ರ ಸ್ಮಾರ್ಟ್ ರಿಜಾರ್ಜ್ ಯೋಜನೆಯನ್ನು ಕಂಪನಿ ಜಾರಿಗೆ ತಂದಿದೆ. ಹೊಸ ಯೋಜನೆಯಲ್ಲಿ ಎರಟರಪಟ್ಟು ಡೇಟಾದೊಂಗೆ ಗ್ರಾಹಕರಿಗೆ ಮೊದಲಿಗಿಂತ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ನಿಮಿಷಗಳು ಕರೆ ಮಾಡಲು ಲಭ್ಯವಾಗಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

79 ರ ರೀಚಾರ್ಜ್ ಮಾಡಿದರೆ 28 ದಿನಗಳ ವ್ಯಾಲಿಡಿಟಿ ಇರಲಿದ್ದು.
64ರ ಟಾಕ್ ಟೈಮ್ ಮತ್ತು 200 ಎಂಬಿ ಡೇಟಾ ಸಿಗಲಿದೆ.
ಪ್ರತಿ ದೂರಸಂಪರ್ಕ ಕಂಪನಿಯೂ ಗ್ರಾಹಕನಿಂದ ಕಂಪನಿಯ ದೊರೆಯುವ ಆದಾಯ (ಎಆರ್‌ಪಿಯು) ಹೆಚ್ಚಿಸಿಕೊಳ್ಳವತ್ತ ಗಮನ ಹರಿಸಿದ್ದು, ಆ ನಿಟ್ಟಿನಲ್ಲಿ ಏರ್ ಟೆಲ್ ಈ ನಿರ್ಧಾರ ತಗೆದುಕೊಂಡಿದೆ.
Leave a Comment