ಧನ್ ಬಾದ್ : ಜಾರ್ಖಂಡದ ಧನ್ ಬಾದ್ ಜಿಲ್ಲಾ ಸೆಷನ್ಸ್ ಮತ್ತು ಹೆಚ್ಚುವರಿ ಕೋರ್ಟ್ನ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ವಾಹನ ಡಿಕ್ಕಿ ಹೊಡಸಿ ಹತ್ಯೆ ಮಾಡಲಾಗಿದೆ.
ಘಟನೆ ಕುರಿಂತAತೆ ಸುಪ್ರೀಂಕೋರ್ಟ್ ತ್ರೀವ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಬುಧುವಾರ ಬೆಳ್ಳಗೆ ವಾಯವಿಹಾರಕ್ಕೆ ಹೋಗಿದ್ದೆ ಆನಂದ್ಗೆ ಹಿಂಬದಿಯಿAದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ರಸ್ತೆಬದಿಗೆ ಬದ್ದಿದ ಅವರನ್ನು ದಾರಿಹೋಕರು ಗಮನಿಸಿ ಆಪ್ಪತ್ರೆಗೆ ದಾಖಲಿಸಿದರು. ಆದರೆ ಅವರು ಬದುಕುಳಿಯಲಿಲ್ಲ. ಮೊದಲು ಇದು ಗುದ್ದೋಡಿದ (ಹಿಟ್ ಆ್ಯಂಡ್ ರನ್) ಪ್ರಕರಣ ಎಂದು ದಾಖಲಾಗಿತ್ತು.
ಆದರೆ, ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆಯ ನಂತರ ಇದು ಉದ್ದೇಶ ಪೂರ್ವಕವಾಗಿ ಮಾಡಿದ ಅಪಘಾತ ಎಂಬುದು ಮನದಟ್ಟಾಯಿತು. ಜಡ್ಜ್ ಆನಂದ್ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದು. ಇಬ್ಬರು ರೌಡಿಗಳ ಜಾಮೀನು ಅರ್ಜಿಯನ್ನು ಇತ್ತೀಚೆಗೆ ವಜಾ ಮಾಡಿದ್ದರು. ಇದೇ ಕಾರಣದಿಂದ ಅವರು ಹತ್ಯೆ ಆಗಿರಬಹುದು ಎಂದು ಶಂಕಿಸಲಾಗಿದೆ.
Leave a Comment