ಭಟ್ಕಳ: ರಾಜ್ಯ ಸರಕಾರದ ಕೋವಿಡ್ -19ರ ನಿಯಮಾವಳಿಗಳ ಪ್ರಕಾರ ಜಾತ್ರೆ, ಉತ್ಸವಗಳಿಗೆ ನಿರ್ಭಂಧವಿರುವುದರಿಂದ ಈ ವರ್ಷ ಅಗಸ್ಟ 4 ಮತ್ತು 5 ರಂದು ನಡೆಯಲಿರುವ ಮಾರಿ ಜಾತ್ರೆಗೆ ಅವಕಾಶವಿಲ್ಲದ ಹಿನ್ನೆಲೆ ಸರಳವಾಗಿ ನಡೆಯಲಿದ್ದು ಭಕ್ತಾಧಿಗಳು ಸಹಕರಿಸಬೇಕಾಗಿ ಶ್ರೀ ಮಾರಿಕಾಂಬಾ ದೇವಸ್ಥಾನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗಸ್ಟ 4 ಬುಧವಾರದಂದು ಮತ್ತು 5 ಗುರುವಾರದವರೆಗೆ 2 ದಿನಗಳ ಕಾಲ ಮಾರಿ ಹಬ್ಬವನ್ನು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ಆಚರಿಸಲಾಗುವುದು. ಭಕ್ತರು ಶ್ರೀ ದೇವಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುವುದು. ಹಾಗೂ ಕೋವಿಡ್-19 ಮಾರ್ಗಸೂಚಿ ಅನುಸಾರವಾಗಿ ಮಾಸ್ಕಗಳು ಕಡ್ಡಾಯವಾಗಿ ಧರಿಸತಕ್ಕದಾಗಿದೆ. ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದುಕೊಳ್ಳಬೇಕೆಂದು ಪ್ರಕಟಣೆಯಲ್ಲಿ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ತಿಳಿಸಿದ್ದಾರೆ.
Leave a Comment