ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿಯ ಕೊಡ್ಲ ಗದ್ದೆಯ ಸಾತನಪಾಲ ಗಣಪತಿ ಗಾಂವಕರ್ ಅವರ ತೋಟ ನೆರೆಯಿಂದ ಕೊಚ್ಚಿ ಹೋಗಿದ್ದಲ್ಲದೆ, ಮನೆ ಹಾಗೂ ಜಮೀನಿನಲ್ಲಿ ತುಂಬಿಹೋಗಿದ್ದ ಮರಮಟ್ಟು, ಮಣ್ಣನ್ನು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೇವಾ ಕಾರ್ಯದ ಮೂಲಕ ಸ್ವಚ್ಛಗೊಳಿಸಲಾಯಿತು. ಕಾಂಗ್ರೆಸ್ ಮುಖಂಡ ಪ್ರಶಾಂತ್ ದೇಶಪಾಂಡೆ ಈ ಭಾಗಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾತನ ಪಾಲಿನ ಗಣಪತಿ ಗಾಂವಕರ್ ಪರಿಸ್ಥಿತಿಯನ್ನು ತೋರಿಸಿ ಸಹಾಯಕ್ಕೆ ಯಾರು ಇಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ. ಪ್ರಶಾಂತ್ ದೇಶಪಾಂಡೆ ಅವರ ಸೂಚನೆಯ ಮೇರೆಗೆ ಡಿ. ಎನ್. ಗಾಂವಕರ್, ಪ್ರಶಾಂತ್ ಸಭಾಹಿತ್, ರಾಘವೇಂದ್ರ ನಾಯಕ್, ರಂಗ ಸಹ್ಯಾದ್ರಿ ಯ ಶ್ರೀಪಾದ್ ಭಟ್, ಆದಿತ್ಯ ಹೆಗಡೆ ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Yellapura news:ಸುದ್ದಿ ಹಾಗೂ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ
https://chat.whatsapp.com/D0Ry5Povwke1s77ibSLq4A


Leave a Comment