ಹೊನ್ನಾವರ; ಬಿಜೆಪಿ ಸರಕಾರ ಜನಪ್ರಿಯ ಕೆಲಸಗಳನ್ನು ಮಾಡುತ್ತಿದೆ. ಬಿಜೆಪಿ ಸರಕಾರ ಮಾಡಿದ ಕೆಲಸವನ್ನು ನಾವು ಹೆಮ್ಮೆಯಿಂದ ಹೇಳಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಹೊನ್ನಾವರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯ ಮಂತ್ರಿಗಳು ಜಿಲ್ಲೆಗೆ ಬಂದಾಗ ಮೀನುಗಾರರು ನಮ್ಮ ಪಕ್ಷದ ಬೆಂಬಲಿಗರು ಮೀನುಗಾರರಿಗೆ ಬೇರೆ ಜಿಲ್ಲೆ ಮತ್ತು ರಾಜ್ಯಕ್ಕೆ ಮೀನುಗಾರಿಕೆ ಕೆಲಸಕ್ಕೆ ಹೋಗಲು ವ್ಯಾಕ್ಸಿನ್ ತೆಗೆದುಕೊಳ್ಳದೆ ಇರುವುದರಿಂದ ತೊಂದರೆಯಾಗುತ್ತಿದೆ.
ಅವರಿಗೆ ವ್ಯಾಕ್ಸಿನ್ ವ್ಯವಸ್ಥೆ ಆಗಬೇಕು ಎಂದು ನಾನು ವಿನಂತಿ ಮಾಡಿಕೊಂಡೆ. ಮುಖ್ಯ ಮಂತ್ರಿಗಳು ಅದೇ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ ಮಾಡಿ 48 ಗಂಟೆಯಲ್ಲಿ ಮೀನುಗಾರರಿಗೆ ವ್ಯಾಕ್ಸಿನ್ ವ್ಯವಸ್ಥೆ ಮಾಡಿದ್ದಾರೆ.
ಈಗ ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಮೀನುಗಾರರಿಗೆ ವ್ಯಾಕ್ಸಿನ್ ನೀಡಲು ಪ್ರಾರಂಭ ಮಾಡಲಾಗಿದೆ ಎಂದರು. ಇದು ಬಿಜೆಪಿ ಸರಕಾರ ತಾಕತ್ತು. ಯಾವಾಗಲು ಬಿಜೆಪಿ ಜನರ ಪರವಾಗಿದೆ. ಬಿಜೆಪಿ ಮಾಡುತ್ತಿರುವ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದರು.
Karmikara card eddavarige yellarigu sariyagi duddu muttisoke agilla kelidre arji kodbeku antare tantrika dosa antiddare ahagdre card madovaga yake agilla anta keli evarige