ಭಟ್ಕಳ: ಕುಟುಂಬವನ್ನು ಬಡತನದಿಂದ ಪಾರುಮಾಡಲು ಇದ್ದುದ್ದನ್ನಲವೂ ಮಾರಿ ಅಷ್ಟಿಷ್ಟು ಸಾಲಾ ಮಾಡಿ ಇರಾನ್ ದೇಶಕ್ಕೆ ತೆರಳಿದ ಭಟ್ಕಳದ ಬಡಕುಟುಂಬದ ಯಾಸೀನ್ ಶಾಹ ಮಕಾನ್ದಾರ್(31) ಕಳೆದ 20 ತಿಂಗಳ ಕಾಲ ಇರಾನ್ ವನವಾಸ ಮುಗಿಸಿ ಬುಧವಾರ ಬೆಂಗಳೂರು ತಲುಪಿದ್ದು ಗುರುವಾರ ತಾಯ್ನೆಲ ಭಟ್ಕಳಕ್ಕೆ ತಲುಪುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿದ ಯಾಸೀನ್, ಕೊನೆಗೆ ನನ್ನ 20 ತಿಂಗಳ ವನವಾಸಕ್ಕೆ ತೆರೆಬಿದ್ದು ಅಲ್ಲಿ ಅನುಭವಿಸಿದ ಕಷ್ಟ, ಒಂದು ಹೊತ್ತಿನ ಊಟಕ್ಕೂ ತೊಂದರೆ ಪಡಬೇಕಾದ ಸ್ಥಿತಿಯನ್ನು ಅವರು ದೂವರವಾಣಿ ವಿವರಿಸಿದ್ದು ನನ್ನನ್ನು ಕಷ್ಟದಿಂದ ಪಾರುಮಾಡಿದ ಏಮ್ ಇಂಡಿಯಾ ಫೆÇೀರಂ ನ ಶಿರಾಲಿ ಮುಝಫ್ಫರ್ ಶೇಖ್ ಹಾಗೂ ಭಟ್ಕಳ ಸಮುದಾಯದ ಯೂಸೂಫ್ ಬರ್ಮಾವರ್, ಸರಫ್ರಾಝ್ ಶೇಖ ಅಫ್ಝಲ್ ಎಸ್.ಎಂ ಹಾಗೂ ನ್ಯಾಯವಾದಿ ಯಾಸಿರ್ ಆರಫಾತ್ ಮಕಾದ್ದಾರ್ ರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳುತ್ತಾರೆ. ವಿಸಾ ಎಜೆಂಟರ ಮೂಲಕ ಇರಾನ್ ನೌಕೆಯೊಂದರಲ್ಲಿ ಕೆಲಸಕ್ಕೆ ಸೇರಿದ ಭಟ್ಕಳ ಅಝಾದ್ ನಗರ ನಿವಾಸಿ ಯಾಸೀನ್ ಶಾಹ ಮಕಾನದಾರ ಕಳೆದ 20 ತಿಮಗಳಿಂದ ಸಮುದ್ರದಲ್ಲಿ ನಿಂತುಕೊಂಡಿರುವ ಹಡಗಿನಲ್ಲಿ ಸಿಲುಕಿಕೊಂಡಿದ್ದು ವೇತನವಿಲ್ಲದೆ ತೀವ್ರ ತೊಂದರೆಯನ್ನು ಅನುಭವಿಸಿದ್ದರು.

ಹೇಗಾದರೂ ಮಾಡಿ ಭಾರತಕ್ಕೆ ಮರಳಲು ಹಂಬಲಿಸುತ್ತಿದ್ದ ಯಾಸೀನ್ ರ ಬೆನ್ನೆಲುಬಾಗಿ ನಿಂತುಕೊಂಡಿದ್ದು ಏಮ್ಸ್ ಇಂಡಿಯಾ ಫೆÇೀರಂ ನ ಶಿರಾಲಿ ಮುಝಪ್ಪರ್ ಶೇಖ್ ಮತ್ತವರ ತಂಡ. ಪ್ರತಿ ಹೆಜ್ಜೆಗೂ ಅವರು ತನಗೆ ಮಾರ್ಗದರ್ಶನ ಮಾಡಿದ್ದು ಅಲ್ಲದೆ ಕೊನೆ ಘಳಿಗೆಯಲ್ಲಿ ನನಗೆ ಬರಬೇಕಾಗಿದ್ದ 3800ಡಾಲರ್ ವೇತನದಲ್ಲಿ ಅವರ ಪ್ರಯತ್ನದಿಂದಾಗಿ 2000ಡಾಲರ್ ವೇತನ ದೊರೆಯುವಂತೆ ಮಾಡಿದ್ದಾರೆ ಇದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಅವರು ಯಾಸಿನ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಇರಾನ್ ನಿಂದ ಬೆಂಗಳೂರಿಗೆ ಬಂದ ನನಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಲ್ಲದೆ ಭಟ್ಕಳಕ್ಕೆ ಹೋಗಲು ಬಸ್ ಟಿಕೆಟ್ ಊಟ ಎಲ್ಲದ ವ್ಯವಸ್ಥೆಯನ್ನು ಏಮ್ ಇಂಡಿಯಾ ಫೆÇೀರಂ ಸಂಸ್ಥೆ ಮಾಡಿದೆ ಎಂದು ತಿಳಿಸಿದ್ದಾರೆ. ಕಳೆ 20 ತಿಂಗಳಿಂದ ನಾನು ಇರಾನ್ ನಲ್ಲಿ ತುಂಬಾ ಕಷ್ಟ ಮತ್ತು ನೋವು ಅನುಭವಿಸಬೇಕಾಗಿ ಬಂತು. ಎಜೆಂಟರು ಗಳ ಮೂಲಕ ಯಾರು ಕೂಡ ವಿದೇಶಕ್ಕೆ ಉದ್ಯೋಗಕ್ಕಾಗಿ ಹೋಗಬೇಡಿ. ಇರಾನ್ ದೇಶಕ್ಕಂತೋ ಖಂಡತ ಬೇಡ ಎನ್ನುವ ಯಾಸಿನ್, ಅಲ್ಲಿ ಮೋಸಗಾರರೆ ತುಂಬಿಕೊಂಡಿದ್ದಾರೆ. ಭಾರತಕ್ಕೆ ಮರಳುವ ನನ್ನ ಕನಸನ್ನು ನನಸು ಮಾಡಿದ ಭಾರತೀಯ ದೂತವಾಸದ ಅಧಿಕರಿಗಳು, ಇರಾನ್ ಸರ್ಕಾಕ್ಕೂ ನಾನು ಋಣಿಯಾಗಿದ್ದೇನೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭಟ್ಕಳ ಹಾಗೂ ಸುದ್ದಿಗಾಗಿ ಈ ಗ್ರುಪ್ ಸೇರಿ ;
https://chat.whatsapp.com/GtLqeUMgaXDGRtGRyC9KnP
Leave a Comment