ಶಿರಸಿ : ಇಲ್ಲಿನ ಇಕ್ರಾ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತ ಪತ್ನಿಯೊಂದಿಗೆ ಟಿ ಎಸ್ ಎಸ್ ರಸ್ತೆ ಅಶೋಕನಗರದಲ್ಲಿ ವಾಸಮಾಡಿಕೊಂಡಿದ್ದ.
ಮೌನೇಶ ಅಶೋಕ ಕಂಬಾರ ಎಣಬವರು ಜು. 31 ರಿಂದ ನಾಪತ್ತೆ ಯಾಗಿರುವ ಬಗ್ಗೆ ಇವರ ಹೆಂಡತಿ ಶ್ರೀಮತಿ ಅನ್ನಪೂರ್ಣ ಪೊಲೀಸ್ ದೂರು ನೀಡಿದ್ದಾರೆ. ಕೆಲಸಕ್ಕೆ ಹೋಗದೆ ಮನೆಯಲ್ಲಿ ಮೊಬೈಲ್‌ನೊಂದಿಗೆ ಕಾಲಕಳೆಯುತ್ತ ಕೂತಿರುತ್ತಿದ್ದ ಮೌನೇಶ ಜು. 31 ರಂದು ಮಧ್ಯಾಹ್ನ ತನಗೆ ಹೇಳದೆ ಮನೆಯಿಂದ ಹೊರಹೋಗಿದ್ದು.

ನಂತರ ಪೋನ್ ಕರೆ ಮಾಡಿ ಕೇಳಿದಾಗ ತಾನು ಬೆಂಗಳೂರು ಕಡೆ ಹೋಗುವುದಾಗಿ ಹೇಳಿದ್ದಾರಷ್ಟೆ. ಆಮೇಲೆ ಅವರ ಪೋನ್ ಸ್ವಿಚ್ ಆಫ್ ಆಗಿದೆ. ನಾಲ್ಕು ದಿನವಾದರೂ ಇವರ ಸುಳಿವಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವ್ಯಕ್ತಿ ಯಾರಿಗಾದರೂ ಕಂಡಲ್ಲಿ ಶಿರಸಿ ಹೊಸ ಮಾರುಕಟ್ಟೆ ಠಾಣೆ (08384-236330/9480805255) ಗೆ ತಿಳಿಸಲು ಕೋರಲಾಗಿದೆ.
Leave a Comment