ಕುಮಟಾ : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕು ಹೆಚ್ಚಾಗ ತೊಡಗಿದ್ದು. ಈ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ, ಬೌತಿಕ ಅಂತರ ಕಾಯ್ದಕೊಳ್ಳಬೇಕು ಎಂದು ತಹಸೀಲ್ದಾರ ಆರೆ. ವಿ. ಕಟ್ಟಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಕೊರೊನಾ 3 ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬಿರುತ್ತದೆ ಎಂದು ತಜ್ಞರ ವರದಿ ಹೇಳುತ್ತಿದ್ದು, ಈ ಕಾರಣದಿಂದ ಕುಮಟಾ ತಾಲೂಕು ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಾಯ ಮಾಸ್ಕ್ ಧರಿಸಬೇಕು. ಅಲ್ಲದೇ ಅಂಗಡಿಕಾರರು ಮಾಸ್ಕ್ ಧರಿಸಿ ಮಾಸ್ಕ ಧರಿಸದೇ ಬರುವ ಗ್ರಾಹಕರಿಗೆ ವಸ್ಸುಗಳನ್ನು ನೀಡಬಾರದು ಎಂದರು ಕೋವಿಡ್ ನಿಯಂತ್ರಣಕ್ಕೆ ತಾಲೂಕಿನಲ್ಲಿ ಟಾಸ್ಕ್ಪೋರ್ಸ್ ಸಮಿತಿ ರಚಿಸಲಾಗಿದ್ದು, ಮಾಸ್ಕ ಧರಿಸದೇ ಸುತ್ತಾಡುತ್ತಿರುವರಿಗೆ ದಂಡ ವಿಧಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
Leave a Comment