ಭಟ್ಕಳ : ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದ ಯುವಕನೊರ್ವ ನೀರು ಪಾಲಾದ ಘಟನೆತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಾಗಟೆ ಬೈಲನ ವೆಂಕಟಪುರ ನದಿಯಲ್ಲಿ ಭಾನವಾರ ನಡೆದಿದೆ .

ನೀರುಪಾಲಾದ ಯುವಕ ಜಯಂತ ರಾಮಗೊಂಡ ೧೯ವರ್ಷ ಎಂದು ಗುರುತಿಸಲಾಗಿದೆ, ಇತ ಗದ್ದೆ ಕೆಲಸ ಮುಗಿಸಿ ಕಾಲು ತೊಳೆಯಲು ನೀರಿಗೆ ಇಳಿದಾಗ ಆಕಸ್ಮಿ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿದ್ದ, ಸುದ್ದಿ ತಿಳಿದು ಸ್ಥಳಕ್ಕೆ ನೂರಾರು ಜನರು ಆಗಮಿಸಿ ನದಿ ದಂಡೆಯಲ್ಲಿ ಸೇರಿದ್ದರು.ವೆಂಕಟಪುರ ಹೂಳೆಯಲ್ಲಿ ಸ್ಥಳೀಯ ಯುವಕರು ಹುಡುಗಾಟ ನಡೆಸಿ ಸ್ಥಳೀಯ ಯುವಕರು ಸಹಾಯದಿಂದ ಶವನ್ನು ಮೇಲಕ್ಕೆ ಎತ್ತಲಾಗಿದೆ, ಯುವಕನ ಶವ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ, ಸ್ಥಳಕ್ಕೆ ಗ್ರಾಮೀಣ ಠಾಣೆ ಪಿ.ಎಸ್.ಐ ಭರತ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದ್ದಾರೆ
Leave a Comment