ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಲು ಹಾಗೂ ಕರೊನಾ ಕುರಿತ ಇತರ ಮಾಹಿತಿ ತಿಳಿಯಲು ಕೇಂದ್ರ ಸರ್ಕಾರ ಸರಳೀಕೃತ ವಾಟ್ಸ್ ಆ್ಯಪ್ ಹೆಲ್ಪ್ ಡಿಸ್ಕ್ ಆರಂಬಿಸಿದೆ. ಕೇಂದ್ರ ಸರ್ಕಾರದ ಎಲೆಕ್ಟಾçನಿಕ್ ಮತ್ತು ಮಾಹಿತಿ ತಂತ್ರಚ್ಞಾನ ಇಲಾಖೆ ಹಾಗೂ ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಈ ಕೋವಿಡ್ ಹೆಲ್ಪ್ ಡಿಸ್ಕ್ ಆರಂಭಿಸಿವೆ. 9013151515 ವಾಟ್ಸ್ ಆ್ಯಪ್ ಸಂಖ್ಯೆಗೆ ಕೋವಿಡ್ ಸರ್ಟಿಫಿಕೇಟ್ ಎಂದು

ಇಂಗ್ಲಿಷನಲ್ಲಿ (Covied Certificate ) ಕಳುಹಿಸಿದರೆ, ಅಲ್ಲಿಂದ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಎಸ್ ಎಂ ಎಸ್ ಬರುತ್ತದೆ. ಅದನ್ನು ವಾಟ್ಸ್ ಆ್ಯಪ್ನಲ್ಲಿ ದಾಖಲಿಸಿದರೆ, ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಬರುತ್ತದೆ. ಇನ್ನು ಮೆನು ( Menu) ಎಂದು ಟೈಪ್ ಮಾಡಿದರೆ ಕೋವಿಡ್ ಲಸಿಕೆ ನೀಡುವ ಕೇಂದ್ರಗಳು, ಕೋವಿಡ್ ಕುರಿತ ಇತ್ತೀಚಿನ ವಿಚಾರಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.
Leave a Comment