ಬೆಂಗಳೂರು : ಸ್ನೇಹಿತನ ಸೋಗಿನಲ್ಲಿ ಮನೆಗೆ ಬಂದು ಬೈಕ್, ಚಿನ್ನಾಭರಣ ಕದ್ದ ಆರೋಪಿ ಬ್ಯಾಡರಹಳ್ಳಿ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬ್ಯಾಡರಹಳ್ಳಿಯ ನಿವಾಸಿ ಅಮಿತ್ (32) ಬಂಧಿತ ಈತನಿಂದ 1 ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ 2.86 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಜಪ್ತಿ ಮಾಡಲಾಗಿದೆ.

ಅಮಿತ್ ದೂರುದಾರರಿಗೆ ಪರಿಚಿತನಾಗಿದ್ದು, ಅವರ ವಿಶ್ವಾಸ ಗಳಿಸಲು ಆಗಾಗ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಮನೆಗೆ ಬಂದು 3 ಸಾವಿರ ರೂ., ದ್ವಿಚಕ್ರ ವಾಹನ ಹಾಗೂ 18 ಗ್ರಾಂ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಈ ಸಂಬAಧ ಮನೆ ಮಾಲೀಕ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅಮಿತ್ ವಿರುದ್ಧ ದೂರು ದಾಖಲಿಸಿದ್ದರು.
Leave a Comment